‘ಜೇನು ಸಾಕಾಣೆ’ ಕಾರ್ಯಕ್ರಮದಡಿ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

0 289

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿ ಜೇನುಕೃಷಿ ತರಬೇತಿ/ಜೇನುಪಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್‍ಗಳಿಗೆ ಸಹಾಯಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.16 ರವರೆಗೆ ವಿಸ್ತರಿಸಲಾಗಿದೆ.

ಆಸಕ್ತ ರೈತರು/ಸಾರ್ವಜನಿಕರು ಈ ಕೆಳಕಂಡ ಶಿವಮೊಗ್ಗ ಜಿಲ್ಲೆಯ ಎನ್‍ಐಸಿ ವೆಬ್‍ಸೈಟ್ ಬಳಸಿ, ಅಗತ್ಯ ದಾಖಲಾತಿಗಳೊಂದಿಗೆ ಅ.16 ರೊಳಗೆ ಆನ್‍ಲೈನ್ http://www.shimoga.nic.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಅಥವಾ ನೇರವಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ

  • ಶಿವಮೊಗ್ಗ 08182-279415/9900046087
  • ಭದ್ರಾವತಿ 08282-295029/9448238921
  • ಶಿಕಾರಿಪುರ 08187-223544/9663634388
  • ಸೊರಬ 08184-295112/9902170900
  • ಸಾಗರ 08183-295124/7892782514
  • ಹೊಸನಗರ 08185-295364/9591695327 ತೀರ್ಥಹಳ್ಳಿ 08181-228151/ 6360923705

ತಾಲ್ಲೂಕು ತೋಟಗಾರಿಕೆ ಇಲಾಖಾ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!