ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆಯ ವಿಜೇತರು

0 19

ಶಿವಮೊಗ್ಗ: ಮಂಗಳೂರಿನಲ್ಲಿ ದಿ: 27-09-2023 ರಿಂದ 30-09-2023 ರವರೆಗೆ ನಡೆದ ಕರ್ನಾಟಕ ಸ್ಟೇಟ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಕೆಳಕಂಡ ಕ್ರೀಡಾಪಟುಗಳು ಸಾಧನೆ ಮಾಡಿರುತ್ತಾರೆ.


ಸಿರಿ ಕೆ.ಜೆ ಟ್ರೈಯಾತ್ಲೈನ್ ಕ್ರೀಡೆಯಲ್ಲಿ ಪ್ರಥಮ, ಅಮೂಲ್ಯ 3 ಕಿ.ಮೀ ನಡಿಗೆ ದ್ವಿತೀಯ, ಅಮೂಲ್ಯ ಉದ್ದ ಜಿಗಿತ ತೃತೀಯ, ಚೈತನ್ಯ ಎಂ ನಾಯ್ಕ ಜಾವಲಿನ್ ಎಸೆತ ತೃತೀಯ, ಭೂಮಿಕಾ ಕೆ ಎನ್ ಟ್ರಿಪಲ್ ಜಂಪ್ ಪ್ರಥಮ, ಗೌತಮಿ ಗೌಡ ಎತ್ತರ ಜಿಗಿತ ಪ್ರಥಮ, ಶರತ್ ಕೆ.ಜೆ ಕಿಡ್ಸ್ ಜಾವಲಿನ್ ಪ್ರಥಮ, ಸಂಜಯ್ ಎಸ್ 60 ಮೀ ದ್ವಿತೀಯ, ನಿತಿನ್ ಸಿಂಗ್ ಉದ್ದಜಿಗಿತ, ಎಕ್ಸ್‌ ಹೆಚ್ ಲೈನ್ ದ್ವಿತೀಯ ಹಾಗೂ ತೃತೀಯ, ಗೌತಮ್ 100 ಮೀ ದ್ವಿತೀಯ, ಆಕಾಸ್ ಎಸ್ ಗೊಲ್ಲರ್ 400 ಮೀ ದ್ವಿತೀಯ, ಆರ್ಶಿತ್ 800 ಮೀ ದ್ವಿತೀಯ, ಸುದೀಪ್ ಎತ್ತರ ಜಿಗಿತ ಪ್ರಥಮ ಹಾಗೂ ದಿಲೀಪ್ ಟ್ರಿಪಲ್ ಜಂಪ್ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಕ್ರೀಡಾಪಟುಗಳು ಅಥ್ಲೆಟಿಕ್ಸ್ ತರಬೇತುದಾರ ಬಾಳಪ್ಪ ಮಾನೆಯವರ ಬಳಿ ತರಬೇತಿಯನ್ನು ಪಡೆತಯುತ್ತಿದ್ದಾರೆ.

ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Leave A Reply

Your email address will not be published.

error: Content is protected !!