ಡಿಎಸ್‌ಎಸ್ ಘಟಕದ ಹೊಸನಗರ ತಾಲೂಕು ಸಂಚಾಲಕರಾಗಿ ಬಿ.ಎಂ. ಪ್ರಕಾಶ್ ಆಯ್ಕೆ

0 556

ಹೊಸನಗರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ)ಯ (DSS) ಹೊಸನಗರ (Hosanagara) ತಾಲೂಕು ಘಟಕದ ನೂತನ ಸಂಚಾಲಕರಾಗಿ ಎಂ. ಗುಡ್ಡೆಕೊಪ್ಪ ವಾಸಿ ಬಿ.ಎಂ. ಪ್ರಕಾಶ್ ಆಯ್ಕೆಯಾದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಘಟಕದ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅರಳಸುರಳಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಪ್ರಕಾಶ್ ಸರ್ವಾನುಮತದಿಂದ ಆಯ್ಕೆಯಾದರು.

ಸಂಘಟನಾ ಸಂಚಾಲಕರಾಗಿ ಗಂಗನಕೊಪ್ಪ ವಾಸಿ ಎ. ಹರೀಶ್, ಜಯನಗರ ಗುರುಪ್ರಸಾದ್, ಮತ್ತಿಮನೆ ಎಂ. ಸಂದೇಶ್, ಖಜಾಂಚಿಯಾಗಿ ಸಂಪೇಕಟ್ಟೆ ಕೆ. ಪ್ರಭಾಕರ್, ಸಲಹಾ ಸಮಿತಿ ಸದಸ್ಯರಾಗಿ ಸಂಪೆಕಟ್ಟೆ ಸುಬ್ರಹ್ಮಣ್ಯ ಆಯ್ಕೆಯಾದರು.

ಈ ವೇಳೆ ಘಟಕದ ಜಿಲ್ಲಾ ಸಂಚಾಲಕ ಮಾತನಾಡಿ, ಇದೊಂದು ಜಾತ್ಯಾತೀತ ಸಂಘಟನೆ ಆಗಿದ್ದು, ಶೋಷಿತರ ಪರ ಧ್ವನಿಯಾಗುವ ಮೂಲಕ ಸೂಕ್ತ ನ್ಯಾಯಕ್ಕಾಗಿ ಶ್ರಮಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದ್ದು, ಗ್ರಾಮ ಪಂಚಾಯತಿ ಹಾಗೂ ಹೋಬಳಿ ಮಟ್ಟದಲ್ಲಿ ಘಟಕದ ಸಂಘಟನೆಗೆ ಹೊಸ ಆಯಾಮ ರೂಪಿಸುವ ಗುರುತರ ಜವಾಬ್ದಾರಿ ನೂತನ ಸಮಿತಿ ಮೇಲಿದೆ ಎಂದರು.


ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ರಾಜೇಂದ್ರ ಕನ್ನಂಗಿ, ನೆಲ್ಲಿಕಟ್ಟೆ ರಾಜು, ಅಣ್ಣಪ್ಪ ಕೆ.ಬಿ,ಅರಳಸುರಳಿ, ಅನಂತ ಕನ್ನಂಗಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!