ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಹಗರಣದ E.D. ದಾಳಿಗೆ ಕಿಮ್ಮನೆಯವರಿಗೆಷ್ಟು ಪಾಲು ? ಅನಂತಶಾಸ್ತ್ರಿ ಪ್ರಶ್ನೆ

0 528

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಅವರ ಮನೆಗಳ ಮೇಲೆ ನಡೆದಿರುವ ಕಾನೂನ್ಮಾಕ ಅಧಿಕಾರ ಹೊಂದಿರುವ ಇಡಿ ದಾಳಿ ಕುರಿತು ಕೇಂದ್ರ ಮತ್ತು ರಾಜ್ಯದ ಬಿಜೆಪಿಯವರ ಬಗ್ಗೆ ಹಗುರವಾಗಿ ಮಾತನಾಡುವ ಮಾಜಿ ಸಚಿವರ ಬಗ್ಗೆ ಅನುಮಾನ ಕಾಡುವಂತಾಗಿದೆ ಎಂದು ರಿಪ್ಪನ್‌ಪೇಟೆ ಪ್ರಜ್ಞಾವಂತ ನಾಗರೀಕ ಜಿ.ಕೆ. ಅನಂತಶಾಸ್ತ್ರಿ ಆರೋಪಿಸಿದರು.

ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಹಿಡಿದಿರುವ ಆರ್.ಎಂ.ಮಂಜುನಾಥಗೌಡರು ತಮ್ಮ ಈ ಹಿಂದಿನ ಅಧಿಕಾರಾವಧಿಯಲ್ಲಿ ಸಿಟಿ ಬ್ರಾಂಚ್ ಮ್ಯಾನೇಜರ್ ಶೋಭಾ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಎಂ.ಡಿ.ನಾಗಭೂಷಣ ಸೇರಿದಂತೆ ನಕಲಿ ಚಿನ್ನದ ಮೇಲೆ ಸಾಲ ನೀಡಿದ ಬಗ್ಗೆ 18 ಮಂದಿಯನ್ನು ಬಂಧಿಸಲಾಗಿತ್ತು ಈ ಕುರಿತು ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯ ಸರ್ಕಾರದ  ಸಚಿವರಾಗಿದ್ದಾಗ ಸಹ ಮಂಜುನಾಥಗೌಡರ ವಿರುದ್ದ ಸಮರ ಸಾರಿದವರು ಇಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡರ ಪರ ಧ್ವನಿ ಎತ್ತುವ ಮೂಲಕ ಪ್ರತಿಭಟನೆಯನ್ನು ನಡೆಸುವ ನೈತಿಕತೆ ಏನು ಇದೆ ? ಎಂದು ಬಹಿರಂಗಪಡಿಸಲೆಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದರು.

ಮುಂದುವರಿದಂತೆ ಈ ಮೇಲ್ಕಂಡ ಎಲ್ಲ ವಿಚಾರಕ್ಕೆ ಕಾನೂನ್ಮಾಕ ಹೋರಾಟ ಮಾಡಲು ಅವಕಾಶಗಳಿರುವಾಗ ಇಲ್ಲ ಸಲ್ಲದ ಅಪಾಬದನೆ ಮಾಡುವುದರಲ್ಲಿ ಆರ್ಥವಿಲ್ಲ ಎಂದರು.

Leave A Reply

Your email address will not be published.

error: Content is protected !!