ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಸಿಬ್ಬಂದಿ ನೇಮಕಾತಿ ಅವ್ಯವಹಾರ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ; ಬೇಳೂರು

0 854

ಶಿವಮೊಗ್ಗ: ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಸಿಬ್ಬಂದಿ ನೇಮಕಾತಿ ಅವ್ಯವಹಾರವನ್ನು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ಅವರು ಇಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಆರ್.ಎಂ. ಮಂಜುನಾಥ ಗೌಡರಿಗೆ ಅಭಿನಂದನೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಡಿಸಿಸಿ ಬ್ಯಾಂಕಿನಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂ. ಅವ್ಯವಹಾರವಾಗಿದೆ. ಅದು ತನಿಖೆಯಾಗಬೇಕು. ಅಧಿಕಾರಿಗಳ ನೇಮಕದಿಂದ ತನಿಖೆ ವ್ಯವಸ್ಥಿತವಾಗಿ ಆಗಲು ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆಯೇ ಆಗಬೇಕು ಎಂದರು.


ಬ್ಯಾಂಕ್ ಸಿಬ್ಬಂದಿ ನೇಮಕಕ್ಕೆ ಲಕ್ಷಾಂತರ ರೂ. ಸಾಲ ನೀಡಿ ಅದೇ ಸಾಲವನ್ನು ಲಂಚವಾಗಿ ಪಡೆಯಲಾಗಿದೆ. ಕೋಟ್ಯಂತರ ರೂ. ವಂಚನೆಯಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಕಾರವೂ ಇದಕ್ಕಿದೆ. ಅವರ ಬೆಂಬಲಿಗರಾದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವರು ಭ್ರಷ್ಟಾಚಾರದ ಆರೋಪದಲ್ಲಿದ್ದಾರೆ. ಇವೆಲ್ಲವೂ ತನಿಖೆಯಾಗಬೇಕು ಎಂದರು.


ಆರ್.ಎಂ . ಮಂಜುನಾಥ ಗೌಡರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದು ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಸಹಕಾರ ಕ್ಷೇತ್ರಗಳು ರಾಜಕೀಯದಿಂದ ಹೊರ ಇರಬೇಕು ಎಂದರೂ ಕೂಡ ಬಿಜೆಪಿ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಿತ್ತು. ಈಗ ಕಾಲ ಬದಲಾಗಿದೆ. ಆರ್.ಎಂ. ಮಂಜುನಾಥ ಗೌಡರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ ಎಂದರು.

Leave A Reply

Your email address will not be published.

error: Content is protected !!