ಡಿ.10 ರಂದು ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ ; ನಿಟ್ಟೂರು ಶ್ರೀಗಳು

0 737

ಹೊಸನಗರ: ಕರ್ನಾಟಕ ರಾಜ್ಯದಲ್ಲಿ ಸುಮಾರು 40ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆರ್ಯ ಈಡಿಗ ಜನಾಂಗ ನಮ್ಮಲ್ಲಿ ಹೊಂದಣಿಗೆ ಮನೋಭಾವ ಕಡಿಮೆ ಇರುವುದರಿಂದ ನಮ್ಮ ಈಡಿಗರ ಜನಾಂಗದಲ್ಲಿ ಒಟ್ಟು 26 ಒಳ ಪಂಗಡಗಳಿದ್ದು ಅವುಗಳನ್ನು ಒಂದು ಮಾಡುವ ದೃಷ್ಠಿಯಿಂದ ಡಿಸೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶ ಇಟ್ಟುಕೊಂಡಿದ್ದೇವೆ ಎಂದು ನಿಟ್ಟೂರು ರೇಣುಕಾನಂದ ಸ್ವಾಮೀಜಿಯವರು ಹೇಳಿದರು.

ಹೊಸನಗರದ ಆರ್ಯ ಈಡಿಗರ ಸಂಘದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆರ್ಯ ಈಡಿಗರ ಜನಾಂಗದಲ್ಲಿ ಬಡವರು ಹೆಚ್ಚಿನ ಪ್ರಮಾಣದಲ್ಲಿದ್ದು ಅವರಿಗೆ ಸರ್ಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ಜನಾಂಗದ ಜನಸಂಖ್ಯೆ 40 ಲಕ್ಷ ದಾಟಿದ್ದರೂ ಹೊಂದಣಿಕೆಯ ಕೊರತೆಯಿಂದ ಕರ್ನಾಟಕದಲ್ಲಿ ನಮಗೆ ಸರಿಯಾದ ಮಾನ್ಯತೆ ಸಿಗದಂತೆಯಾಗಿದೆ 40 ಲಕ್ಷ ಜನಸಂಖ್ಯೆ ಇದ್ದರೂ ಇಲ್ಲಿಯವರೆಗೆ ನಿಗಮ ಮಂಡಳಿ ನೀಡಿಲ್ಲ. ಸರ್ಕಾರ ತಕ್ಷಣ ನಿಗಮ ಮಂಡಳಿ ಸ್ಥಾಪಿಸಬೇಕು ಹಾಗೂ 500 ಕೋಟಿ ಹಣ ಇಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ:
ದೇವಸ್ಥಾನಗಳಲ್ಲಿ ಶ್ರೇಷ್ಠವಾದ ನಮ್ಮ ಜನಾಂಗದವರು ಹೆಚ್ಚಿಗೆ ನಂಬಿಕೆ ಇಟ್ಟಿರುವ ಶ್ರೀ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ರಾಮಪ್ಪನವರು ಹೆಚ್ಚಿನ ವ್ಯವಸ್ಥೆಯೊಂದಿಗೆ ನಡೆಸಿಕೊಂಡು ಹೋಗುತ್ತಿದ್ದಾರೆ ಈ ದೇವಸ್ಥಾನಕ್ಕೆ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದ್ದು ಸರ್ಕಾರ ಯಾವುದೇ ಹಸ್ತಕ್ಷೇಪ ನಡೆಸದಂತೆ ಸಮಾವೇಶದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಮುಳುಗಡೆ ಸಂತ್ರಸ್ಥರಿಗೆ ಭೂಮಿ ನೀಡುವಂತೆ ಒತ್ತಾಯ:
ಹೊಸನಗರ ತಾಲ್ಲೂಕು ಮುಳುಗಡೆ ಪ್ರದೇಶವಾಗಿದ್ದು ದೀಪದ ಕೆಳಗೆ ಕತ್ತಲೆಯಂಬಂತೆ ನೂರಾರು ವರ್ಷಗಳಿಂದ ಮುಳುಗಡೆ ಪ್ರದೇಶದ ರೈತರು ಸರ್ಕಾರಕ್ಕೆ ಸಾವಿರಾರು ಮನವಿ ಪತ್ರ ಸಲ್ಲಿಸಿದರೂ ಇಲ್ಲಯವರೆಗೆ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಸಿಗಲಿಲ್ಲ. ಈ ವಿಷಯವನ್ನು ಸಮಾವೇಶದಲ್ಲಿ ಪ್ರಾಸ್ತಾಪಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ನಮ್ಮ ಈಡಿಗರ ಸಮಾವೇಶವು 1995ರಲ್ಲಿ ನಡೆದಿದ್ದು ಇಲ್ಲಿಯವರೆಗೆ ಯಾವುದೇ ಸಮಾವೇಶ ನಡೆಸಲಿಲ್ಲ. ನಮ್ಮ ಜನಾಂಗವನ್ನು ಒಂದು ಮಾಡುವ ಪ್ರಯತ್ನ ನಡೆಸಿಲ್ಲ. ಒಂದು ಮಾಡುವ ಉದ್ದೇಶದಿಂದಲೇ ಈ ಸಮಾವೇಶ ನಡೆಸಲಾಗುತ್ತಿದ್ದು ಸುಮಾರು 4 ಲಕ್ಷ ಜನ ಸೇರಲಿದ್ದಾರೆ ಶಿವಮೊಗ್ಗ ಜಿಲ್ಲೆಯಿಂದ 500 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಹೊಸನಗರ ತಾಲ್ಲೂಕಿನಿಂದ 50 ಬಸ್‌ಗಳು ಹೋಗಲಿದೆ. ಹೊಸನಗರ ತಾಲ್ಲೂಕಿನ ಎಲ್ಲ ಈಡಿಗರ ಸಮುದಾಯಗಳು ಒಂದು ಗೂಡಿಸಿಕೊಂಡು ಈ ಸಮಾವೇಶಕ್ಕೆ ಆಗಮಿಸಿ ಈ ಬೃಹತ್ ಜಾಗೃತ ಸಮಾವೇಶವನ್ನು ಉಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಪತ್ರಿಕಾಘೋಷ್ಠಿಯಲ್ಲಿ ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ, ಕಾರ್ಯದರ್ಶಿ ಲೇಖನಮೂರ್ತಿ, ನಿರ್ದೇಶಕರಾದ ಎರಗಿ ಉಮೇಶ್, ಮುರುಳಿ, ಟೀಕಪ್ಪ, ಗೋಪಾಲ್, ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!