ಡಿ.10 ರಂದು ಮೂಲೆಗದ್ದೆ ಮಠದಲ್ಲಿ ಕಾರ್ತಿಕ ದೀಪೋತ್ಸವ – ಧರ್ಮ ಸಮಾರಂಭ

0 435

ರಿಪ್ಪನ್‌ಪೇಟೆ: ಶ್ರೀ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಡಿಸೆಂಬರ್ 10 ರಂದು ಭಾನುವಾರ ಸಂಜೆ ಕಾರ್ತಿಕ ದೀಪೋತ್ಸವ ಮತ್ತು ಧರ್ಮ ಸಮಾರಂಭವು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಅಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ ನಂತರ ಸಂಜೆ ಕಾರ್ತಿಕ ದೀಪೋತ್ಸವ ಧರ್ಮಸಭೆ ಜರುಗಲಿದ್ದು ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!