ತಾಯಿಯಿಂದಲೇ ಹೆತ್ತ ಮಕ್ಕಳಿಗೆ ಭಿಕ್ಷಾಟನೆೆಗೆ ಬಳಕೆ ; ಬುದ್ದಿವಾದ ಹೇಳಿದ ರಿಪ್ಪನ್‌ಪೇಟೆ ಪಿಎಸ್‌ಐ

0 3,666

ರಿಪ್ಪನ್‌ಪೇಟೆ: ಇಲ್ಲಿನ ಶಿವಮೊಗ್ಗ ರಸ್ತೆಯ ಖಾಸಗಿ ಶ್ರೀನಂದಿ ಆಸ್ಪತ್ರೆಯ ಎದುರಿನಲ್ಲಿ ಅಪ್ರಾಪ್ತ ತನ್ನ ಹೆತ್ತ ಮಕ್ಕಳಿಗೆ ಭಿಕ್ಷಾಟನೆ ಮಾಡುವಂತೆ ಮಗನ ಕೈಗೆ ತಟ್ಟೆಕೊಟ್ಟು ಬಲವಂತದಿಂದ ಭಿಕ್ಷೆ ಬೇಡುವಂತೆ ತಾಯಿಯೆ ಅಣಿಗೊಳಿಸುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಕ್ಷಣ ಠಾಣೆಗೆ ಮಾಹಿತಿ ನೀಡಿದ್ದಾರೆ.

ಭಿಕ್ಷಾಟನೆ ಮಾಡುವುದು ಅಕ್ಷಮ್ಯ ಅಪರಾಧ ಇನ್ನೂ ಮುಂದೆ ಹೀಗೆ ಮಾಡಿದರೆ ನಿಮ್ಮಗಳ ವಿರುದ್ದ ಕೇಸ್ ದಾಖಲಿಸಬೇಕಾಗುತ್ತದೆಂದು ಠಾಣಾಧಿಕಾರಿ ಪ್ರವೀಣ್‌ಕುಮಾರ್ ಎಸ್.ಪಿ. ಮಕ್ಕಳ ತಾಯಿಗೆ ಬುದ್ದಿ ಹೇಳಿದ ಪ್ರಸಂಗ ಇಂದು ನಡೆಯಿತು.

ಅಪ್ರಾಪ್ತ ಮಕ್ಕಳನ್ನು ಬೀದಿ ಮೇಲೆ ಭಿಕ್ಷೆ ಬೇಡಿಸಿ ಅದರಿಂದ ಬಂದ ಹಣದಿಂದ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದ ತಾಯಿ, ಭಿಕ್ಷಾಟನೆ ಮಾಡಿಸುವುದು ತಪ್ಪು, ಇನ್ನೊಂದು ಸಾರಿ ಹೀಗೆ ನಿಮ್ಮ ಮಕ್ಕಳು ಭಿಕ್ಷೆ ಬೇಡುವುದನ್ನು ಕಂಡರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ತಾಯಿಗೆ ಎಚ್ಚರಿಕೆ ನೀಡಿ ಇಂದಿನಿಂದಲೇ ತಮ್ಮ ಮಗುವನ್ನು ಶಾಲೆಗೆ ಸೇರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ದೇವರಾಜ್, ಪರಶುರಾಮ, ಧರ್ಮರಾಜ್ ಮತ್ತು ಪೊಲಿಸ್ ಸಿಬ್ಬಂದಿ ವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!