ತೀರ್ಥಹಳ್ಳಿ : ತಾಲೂಕಿನಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗುತ್ತಿದೆ. ಗುತ್ತಿಯಡೇಹಳ್ಳಿಯಲ್ಲಿ ಮತ್ತೊಬ್ಬರಲ್ಲಿ ಸೋಂಕು
ಕಾಣಿಸಿಕೊಂಡಿದೆ. ಅವರನ್ನು ತಾಲೂಕಿನ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುತ್ತಿಯಡೇಹಳ್ಳಿಯ ಮಹಿಳೆಯೊಬ್ಬರಲ್ಲಿ ಕ್ಯಾಸನೂರು ಫಾರೆಸ್ಟ್
ಡಿಸೀಸ್ (ಕೆ.ಎಫ್.ಡಿ) ಸೋಂಕು ಕಾಣಿಸಿಕೊಂಡಿದೆ. 34 ವರ್ಷದ
ಸೋಂಕಿಗೆ ತುತ್ತಾಗಿದ್ದು, ಅವರನ್ನು ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್
ಸುರಗಿಹಳ್ಳಿ ತಿಳಿಸಿದ್ದಾರೆ.
ಇದೆ ಗ್ರಾಮ 54 ವರ್ಷದ ವ್ಯಕ್ತಿಯೊಬ್ಬರಲ್ಲಿ ಮೂರು ದಿನದ
ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಗ್ರಾಮದಲ್ಲಿ
ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.