ಶಿವಮೊಗ್ಗ : ಲಕ್ಷದ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ವಸ್ತುಗಳು
ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಧಿಕಾರಿಗಳ
ಹೈ ಅಲರ್ಟ್ ನಿಂದಾಗಿ ಅದರ ಪ್ರಮಾಣ ಕೋಟಿಗೆ ಜಂಪ್ ಆಗಿವೆ.
ಈಸ್ಟ್ ವೆಸ್ಟ್ ಬಸ್ ಗಳಲ್ಲಿ ಹಣ, ಮತ್ತು ಇತರೆ ವಸ್ತುಗಳು ಬಾಂಬೆಯಿಂದ ಬಂದಿವೆ ಎಂದು ದಾಳಿ ನಡೆಸಿದಾಗ ಲಕ್ಷದ
ಪ್ರಮಾಣದಲ್ಲಿ ಬಟ್ಟೆಗಳು ಪತ್ತೆಯಾಗಿ ವಾಣಿಜ್ಯ ತೆರಿಗೆ ಇಲಾಖೆಗೆ
ಹಸ್ತಾಂತರಗೊಂಡಿದ್ದವು. ಆದರೆ ಇದೀಗ ದೊಡ್ಡ ಪ್ರಮಾಣದ
ಸೀರೆಗಳು ಪತ್ತೆಯಾಗಿವೆ. ಇದರ ಮೌಲ್ಯ 4 ಕೋಟಿ 50 ಲಕ್ಷ ರೂ.
ಎಂದು ಅಂದಾಜಿಸಲಾಗಿದೆ.
ನಗರದ ಕೆ.ಆರ್ ಪುರಂ ರಸ್ತೆಯಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್
ಗೋದಾಮಿನಲ್ಲಿ ಕಳೆದ ಎರಡು ತಿಂಗಳಿಂದ ಬಂದ ಸೀರೆಗಳನ್ನ
ಯಾರೂ ತೆಗೆದುಕೊಂಡು ಹೋಗದ ಕಾರಣ ಅಲ್ಲೇ ಉಳಿದಿತ್ತು.
ನಿನ್ನೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದಾಗ ಈ ವಸ್ತು
ಪತ್ತೆಯಾಗಿದೆ.
ದಾಳಿಯ ವೇಳೆ ನಾಲ್ಕು ಕೋಟಿ 50 ಲಕ್ಷದ ಸೀರೆಗಳಿಗೆ ಯಾವುದೇ ದಾಖಲಾತಿ ಇಲ್ಲದ ಕಾರಣ ಇಷ್ಟು ಮೌಲ್ಯದ ಸೀರೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಗರ ಗ್ರಾಮಾಂತರದಲ್ಲಿ 20 ಲಕ್ಷ ರೂ ಪತ್ತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 20 ಲಕ್ಷ ರೂ ಹಣ ಕಾರಿನಲ್ಲಿ ಸಾಗಿಸುವಾಗ ಸೂಕ್ತ ದಾಖಲಾತಿ ನೀಡದ ಹಿನ್ನಲೆಯಲ್ಲಿ ಹಣ ಮತ್ತು ಕಾರನ್ನ ವಶಪಡಿಸಿಕೊಳ್ಳಲಾಗಿದೆ.
ಸಾಗರದ ಚೂರಿಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಟಾಟಾ ಇಂಡಿಗೋ
ಕಾರಿನಲ್ಲಿ ಸಾಗಿಸುವಾಗ ಪತ್ತೆಯಾಗಿದೆ. ಅದರಂತೆ ನಿನ್ನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಂಕ್‌ನ ಎಟಿಎಂಗೆ ಹಣ ಹಾಕುವ ವಾಹನದಲ್ಲಿ 1 ಕೋಟಿ 40 ಲಕ್ಷ ರೂ.
ಪತ್ತೆಯಾಗಿವೆ.