ದುಮ್ಮ ವಿನಯ್ ಕುಮಾರ್ ರವರಿಗೆ ಶಿವಮೊಗ್ಗ ಜಿಲ್ಲೆಯ ಉತ್ತಮ ಸಹಕಾರಿ ಪ್ರಶಸ್ತಿ ಪ್ರದಾನ

0 776

ಹೊಸನಗರ : ಶಿವಮೊಗ್ಗದ (Shivamogga) ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಹೊಸನಗರದ (Hosanagara) ತುಂಗಾ ಅಡಿಕೆ ಸೌಹಾರ್ದದ ಅಧ್ಯಕ್ಷ ಹಾಗೂ ಹೊಸನಗರ ಕಳೂರು ವಿಎಸ್ಎಸ್ಎನ್ ನ ಅಧ್ಯಕ್ಷ ಮತ್ತು ಹೊಸನಗರ ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷಾದ ಡಿ.ಆರ್ ವಿನಯ್ ಕುಮಾರ್ ದುಮ್ಮ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೊಸನಗರ ತಾಲೂಕಿನ ಉತ್ತಮ ಸಹಕಾರಿಯಾಗಿದ್ದ ಡಿವಿಆರ್ ಎಂದೆ ಖ್ಯಾತರಾಗಿದ್ದ ದಿ|| ದುಮ್ಮ ರುದ್ರಪ್ಪ ಗೌಡರ ಪುತ್ರ ದುಮ್ಮ ವಿನಯ್ ಕುಮಾರ್ ರವರಿಗೆ ಶಿವಮೊಗ್ಗದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉತ್ತಮ ಸಹಕಾರಿ ಪ್ರಶಸ್ತಿ ಲಭಿಸಿದ್ದು ಇದರಿಂದ ಸಹಕಾರಿ ಕ್ಷೇತ್ರದಲ್ಲಿ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತ ವಿನಯ್ ಕುಮಾರ್ ತಿಳಿಸಿದರು.

ಕನ್ನಡರತ್ನ ಡಾ|| ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದವರು ವಿನಯ್ ಕುಮಾರ್ ಅವರ ಮನೆಗೆ ತೆರಳಿ ಅಭಿನಂದಿಸಿದರು.

Leave A Reply

Your email address will not be published.

error: Content is protected !!