ನಮ್ಮದು ಲಿಂಗಾಯಿತ ವೀರಶೈವ ಧರ್ಮ ; ಶಾಸಕ ಶಾಮನೂರು ಶಿವಶಂಕರಪ್ಪ

0 0

ಶಿವಮೊಗ್ಗ: ಸನಾತನ ಧರ್ಮದ ಚರ್ಚೆ ನಡುವೆ ಯಾವ ಧರ್ಮವೂ ಬೇಡ, ನಮ್ಮದು ಲಿಂಗಾಯಿತ ವೀರಶೈವ ಧರ್ಮ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಅವರು ಶನಿವಾರ ನಗರದ ಕೋಟೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಗೆ ಮಾತನಾಡಿ, ಸನಾತನ ಧರ್ಮದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ವೀರಶೈವ ಲಿಂಗಾಯಿತ ಧರ್ಮವು ನಮ್ಮದಾಗಿದೆ. ಹಾಗೆಯೇ ಒಬಿಸಿ ಮೀಸಲಾತಿ ಹೋರಾಟ ಮುಂದುವರಿಯಲಿದೆ ಎಂದರು.

ಭಾರತ ಇಂಡಿಯಾ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡೂ ಹೆಸರನ್ನು ನಾವು ಕರೆಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಪಿ. ದಿನೇಶ್, ವೈ.ಹೆಚ್. ನಾಗರಾಜ್, ಹೆಚ್‌.ಸಿ. ಯೋಗೇಶ್ ಮುಂತಾದವರಿದ್ದರು.

Leave A Reply

Your email address will not be published.

error: Content is protected !!