ನಾನು 6ನೇ ತರಗತಿಯಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ ; ಸ್ಪೀಕರ್ ಯು.ಟಿ ಖಾದರ್

0 54

ಶಿವಮೊಗ್ಗ : ಯೋಗಾಸನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಎಲ್ಲರೂ ಯೋಗಾಸನ ಮಾಡಬೇಕು ಎಂದು ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಸಲಹೆ ನೀಡಿದರು. 

ಶಿವಮೊಗ್ಗ ಮಹಾನಗರ ಪಾಲಿಕೆಯ ಯೋಗ ದಸರಾ ಸಮಿತಿ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಯೋಗ ದಸರಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ನನಗೆ ಹೊಸದಲ್ಲ. ನಾನು 6ನೇ ತರಗತಿಯಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ಅಜ್ಜ (ತಾಯಿಯ ತಂದೆ) ಯೋಗ ಗುರುವಿಗೆ ಮನೆಗೆ ಬಂದು ಕಲಿಸಿಕೊಡುವಂತೆ ಕರೆ ನೀಡುತ್ತಿದ್ದರು. ಇದರಿಂದ ಯೋಗ ನನಗೆ ಕರಗತವಾಗಿದೆ ಎಂದರು. 

ಯೋಗ ದಸರಾ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಸೇರಿ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ ಧ್ಯಾನ ನಡೆಸಲಾಯಿತು. ಸಾವಯವ ಕೃಷಿಕ ಆಹಾರ ತಜ್ಞ ಆ.ಶ್ರೀ. ಆನಂದ್ ಆರೋಗ್ಯ, ಆಹಾರ, ಆನಂದ ಕುರಿತು ಉಪನ್ಯಾಸ ನೀಡಿದರು. 

ವಿಶೇಷ ಯೋಗ ನೃತ್ಯ, ಯೋಗ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಇಂಡಿಯನ್ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ವಿವಿಧ ಚಿಕಿತ್ಸೆ ಮತ್ತು ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ ನಡೆಯಿತು.

Leave A Reply

Your email address will not be published.

error: Content is protected !!