ಶಿವಮೊಗ್ಗ : ಮೇ 07 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಯನೂರಿನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ಹೊರತುಪಡಿಸಿ, ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ, ಶರ್ಟ್, ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ, ಲೈಟರ್, ಯಾವುದೇ ಸ್ಫೋಟಕ, ಅಪಾಯಕಾರಿ ವಸ್ತುಗಳು ಹಾಗೂ ಇತರೆ ಯಾವುದೇ ವಸ್ತುಗಳನ್ನು ತರುವಂತಿರುವುದಿಲ್ಲ.