ನಿವೇಶನಗಳ ಹಂಚಿಕೆಯಲ್ಲಿ ತಾರತಮ್ಯ ಆರೋಪ ; ಗ್ರಾಮಸ್ಥರಿಂದ ಪ್ರತಿಭಟನೆ

0 85

ಶಿವಮೊಗ್ಗ: ಅಮೃತ ಯೋಜನೆಯಡಿಯಲ್ಲಿ ಬಡವರಿಗಾಗಿ ನಿವೇಶನ ವಿತರಿಸಲು ವೀರಣ್ಣನ ಬೆನವಳ್ಳಿಯಲ್ಲಿ ನಿರ್ಮಾಣ ಮಾಡಿರುವ ನಿವೇಶನಗಳ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಆಯನೂರು ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ನಿವೇಶನ ಹಂಚಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡದೆ ಅನರ್ಹರಿಗೆ ನೀಡಲಾಗಿದೆ. ಇದಕ್ಕಾಗಿ ಗ್ರಾಮಸಭೆಯನ್ನೂ ಕರೆದಿಲ್ಲ. ಜಿಲ್ಲಾಡಳಿತದ ಅನುಮೋದನೆಯನ್ನೂ ಪಡೆದಿಲ್ಲ. ಶಾಸಕರ ಗಮನಕ್ಕೂ ತರದೆ ಏಕಾಏಕಿ ಹಂಚಿಕೆ ಮಾಡಲಾಗಿದೆ.ಆದ್ದರಿಂದ ಈಗಿರುವ ಪಟ್ಟಿಯನ್ನುರದ್ದುಗೊಳಿಸಿ ಒಂದು ವಾರದೊಳಗೆ ಅರ್ಹರಿಗೆ ನಿವೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಬದಲ್ಲಿ ಗ್ರಾಮಸ್ಥರಾದ ವೇಲಾಯುಧ, ಅನ್ಸರ್, ಮಹಮ್ಮದ್, ಕೌಸರ್ ಭಾನು, ಅಣ್ಣಪ್ಪ, ಆರ್ಮುಗಂ, ಶಶಿಕುಮಾರ್, ಸಮೀವುಲ್ಲಾ, ಅತಾವುಲ್ಲಾ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!