ಪತ್ರಿಕಾ ವರದಿಗಾರ ಮತ್ತು ವಿತರಕ ರಾಮಕೃಷ್ಣ ಇನ್ನಿಲ್ಲ !

0 116

ತೀರ್ಥಹಳ್ಳಿ : ಪಟ್ಟಣದಲ್ಲಿ ಪ್ರತಿ ಮನೆ ಮನೆಗೂ ನಿತ್ಯ ಬೆಳಗಿನ ಪತ್ರಿಕೆಗಳನ್ನು ತಲುಪಿಸಿ ಮನೆ ಮಾತಾಗಿದ್ದ ವರದಿಗಾರರು ಹಾಗೂ ಪತ್ರಿಕಾ ವಿತರಕರಾದ ರಾಮಕೃಷ್ಣ  (89) ವಯೋಸಹಜದಿಂದ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಪಟ್ಟಣದ ಕೆ ಸಿ ರಸ್ತೆಯ ನಿವಾಸಿಯಾಗಿದ್ದ ಇವರು ಹಲವಾರು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಮತ್ತು ಹೊಸದಿಗಂತ ಪತ್ರಿಕೆಯ ವಿತರಕರಾಗಿ ಮನೆ ಮನೆಗೆ ತಲುಪಿಸುತ್ತಿದ್ದರು. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರ ಮೃತಪಟ್ಟಿದ್ದಾರೆ.


ಮೃತರಿಗೆ ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave A Reply

Your email address will not be published.

error: Content is protected !!