ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಕಡ್ಡಾಯಗೊಳಿಸಲು ಜಿಲ್ಲಾಡಳಿತಕ್ಕೆ ಬಿಜೆಪಿ ಯುವ ಮುಖಂಡ ನರ‍್ಲೆ ರಮೇಶ್ ಆಗ್ರಹ

0 341


ಹೊಸನಗರ: ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಗಾಗಿ ಮತದಾರರ ಪಟ್ಟಿ ನೋಂದಣಿ ಹಾಗೂ ಪರೀಕ್ಷರಣ ಕಾರ್ಯ ಆರಂಭಗೊಂಡಿದ್ದು, ಪದವಿ ಪಡೆದು ಮೂರು ವರ್ಷ ಪೂರ್ಣಗೊಂಡ ಮತದಾರರು ಈ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾವಣೆ ಮಾಡಲು ಅರ್ಹತೆ ಹೊಂದಿದ್ದರೂ, ತಮ್ಮ ಹೆಸರು ನೋಂದಣಿ ಮಾಡಲು ಮೀನಾಮೇಷ ಎಣಿಸುತ್ತಿರುವುದು ಚುನಾವಣೆಯ ಅಗತ್ಯತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಹೊಸನಗರ ತಾಲೂಕಿನ ಬಿಜೆಪಿ ಯುವ ಮುಖಂಡ ನರ‍್ಲೆ ರಮೇಶ್ ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮುಂಬರುವ ನೈರುತ್ಯ ಪದವಿಧರ ಕ್ಷೇತ್ರದ ಅರ್ಹ ಮತದಾರರು ತಮ್ ಹೆಸರು ನೋಂದಣಿ ಕಾರ್ಯಕ್ಕೆ ಮುಂದಾಗುವಂತೆ ಈವರೆಗೂ ಯಾವುದೇ ಸ್ಪಷ್ಟ ಮಾಹಿತಿ ನೀಡುವಲ್ಲಿ ಜಿಲ್ಲಾಡಳಿತ ವಿಫವಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಚುನಾವಣಾ ಆಯೋಗವು ಈ ಬಗ್ಗೆ ಯಾವುದೇ ಸೂಕ್ತ ತರಹದ ಜಾಹೀರಾತು, ಮಾಧ್ಯಮ ಪ್ರಕಟಣೆಯನ್ನು ನೀಡಿಲ್ಲ. ಕಳೆದ ಬಾರಿ ಹೊಸನಗರ ತಾಲೂಕಿನಲ್ಲಿ ಕೇವಲ 1300 ಪದವಿಧರ ಮತದಾರರು ಹೆಸರು ನೋದಾಯಿಸಿದ್ದರು. ಆದರೆ, ಈ ಬಾರಿ ಇದು ಈ ವರೆಗೂ ಕೇವಲ ಏಳು ನೂರು ಪದವಿಧರರು ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಮುಂದಾಗಿರುವುದು ಆಶ್ಚರ್ಯಕರ ಬೆಳವಣಿಗೆ ಎಂಬಂತೆ ಕಂಡುಬರುತ್ತಿದೆ.

ಶೇ.15 ನೋಂದಾಯಿತ ಪದವಿಧರರು ಉಳಿದ ಶೇ.85ರಷ್ಟು ನೋಂದಣಿ ಆಗದವರನ್ನು ಆಳುವ ಪರಿ ಪದವಿಧರ ಕ್ಷೇತ್ರದ ಅಸ್ತಿತ್ವವನ್ನು ಪ್ರಜ್ಞಾವಂತ ಜನತೆ ಇಂದು ಪ್ರಶ್ನಿಸುವಂತಿದೆ. ಈ ಎಲ್ಲಾ ತುಕ್ಕು ಹಿಡಿದಂತಿರುವ ಅನಿಷ್ಟ ಪದ್ದತಿಗಳಿಗೆ ಸರ್ಕಾರ ಕೂಡಲೇ ಇತಿಶ್ರೀ ಹಾಡಲು ಮುಂದಾಗುವಂತೆ ಒತ್ತಾಯಿಸಿರುವ ಅವರು, ಪದವಿಧರ ಕ್ಷೇತ್ರದ ಮತದಾರರ ನೋಂದಣಿ ಕಡ್ಡಾಯಗೊಳಿಸುವಂತೆ ಚುನಾವಣಾ ಆಯೋಗವನ್ನು ತಾಲೂಕು ಪದವಿಧರ ಒಕ್ಕೂಟದ ಪರವಾಗಿ ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!