ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆ | ಸದಸ್ಯರಿಗೆ ಶೇ.10 ಲಾಭಾಂಶ ಘೋಷಣೆ ; ಧರ್ಮಪ್ಪ ಡಿ

0 244

ಹೊಸನಗರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ನಿಯಮಿತದಲ್ಲಿ ಸಂಘದ ಸದಸ್ಯರಿಗೆ 2023ನೇ ಸಾಲಿನಲ್ಲಿ ಶೇ.10 ಲಾಭಾಂಶ ಪಡೆಯಲಾಗುವುದು ಎಂದು ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಧರ್ಮಪ್ಪ ಡಿ ಯವರು ಘೋಷಿಸಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪ್ಪನವರು ಸಭೆಗೆ ತಿಳಿಸಿದರು.

ಈ ವರ್ಷ ಪ್ರಾರಂಭದಲ್ಲಿ 454 ಜನ ಸದಸ್ಯರಿದ್ದು ಹೊಸದಾಗಿ ಮೂರು ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆ‌ ಒಟ್ಟು 457 ಸದಸ್ಯರಿದ್ದು ಎಫ್.ಡಿ ನೀಡಿದವರಿಗೆ ಪುರಸ್ಕಾರ ಹಾಗೂ ಷೇರುದಾರರಿಗೆ ಪುರಸ್ಕಾರ ಶಿಕ್ಷಕರ ದಿನಾಚರಣೆಗೆ ನೆರವು, ಶಿಕ್ಷಕರ ಕುಂದುಕೊರತೆ ಸಾಲಗಳು ಬಾಕಿಯಾಗದಂತೆ ಎಚ್ಚರಿಕೆ ವಹಿಸುವುದು ಷೇರುದಾರರ ಮಕ್ಕಳಿಗೆ ಪುರಸ್ಕಾರ ನೀಡುವಿಕೆ ಷೇರುದಾರರು ಅನಾರೋಗ್ಯ ಹೊಂದಿದಲ್ಲಿ ನೆರವು ನೀಡುತ್ತಾ ಬಂದಿದ್ದು ಮುಂದಿನ ದಿನದಲ್ಲಿ ಈ ಸವಲತ್ತುಗಳನ್ನು ಮುಂದುವರೆಸಲಾಗುವುದು. ನಮ್ಮ ಸಂಘ ಬೆಳೆಯಬೇಕಾದರೆ ಸದಸ್ಯರ ಪಾತ್ರ ಹಿರಿದಾಗಿದ್ದು ನಾವು ಮಾಡುವ ಸಂಘದ ಲೆಕ್ಕಪತ್ರಗಳು ಪರಿಶುದ್ಧವಾಗದಲ್ಲಿ ಸಂಘದ ಸದಸ್ಯರು ನಮ್ಮ ಸಂಘದ ಬಗ್ಗೆ ಗೌರವ ನೀಡುತ್ತಾರೆ. ನಾವು ಮಾಡುವ ವ್ಯವಹಾರದಲ್ಲಿ ಪಾರದರ್ಶಕ ಆಡಳಿತ ಮುಖ್ಯವಾಗಿರುತ್ತದೆ. ನಮ್ಮ ಸಂಘ ಇಲ್ಲಿಯವರೆಗೆ ಪಾರದರ್ಶಕ ಆಡಳಿತ ನೀಡುತ್ತಾ ಬಂದಿದ್ದು ನಮ್ಮ ಸಂಘದಲ್ಲಿ ಸದಸ್ಯರು ಡಿಪಾಸಿಟ್ ಮಾಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಸಂಧರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಉಪಾಧ್ಯಕ್ಷ ಅಕ್ಬರ್ ಭಾಷಾ, ಗೌರವ ಕಾರ್ಯದರ್ಶಿ ಧರ್ಮಪ್ಪ ಡಿ, ಚಂದ್ರಪ್ಪ, ದೇವೇಂದ್ರಪ್ಪ, ರಾಜು ಹೆಚ್.ಎಸ್, ಸುಧಾಕರ್, ಟಿ.ಎಸ್. ಮಹಾಂತೇಶ್, ಆನಂದಪ್ಪ, ಸುಜಾತ, ಫರೀದಾ, ನಿವೃತ್ತ ಶಿಕ್ಷಕರು ಹಾಗೂ ಸಂಘದ ಕಾರ್ಯದರ್ಶಿಯಾಗಿದ್ದ ಗಂಗಾಧರಯ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!