ಫೇಸ್‌ಬುಕ್‌ನಲ್ಲಿ ಪರಿಚಯ ; ತಾನು ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ 6.50 ಲಕ್ಷ ರೂ. ವಂಚನೆ

0 0

ಶಿವಮೊಗ್ಗ : ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ತಾನು ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ 6.50 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಏನಿದು ಪ್ರಕರಣ:

ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ.‌ ಆಕೆ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ ಕೆಲ ದಿನ ಆ ವ್ಯಕ್ತಿಯೊಂದಿಗೆ ಚಾಟಿಂಗ್ ನಡೆಸಿದ್ದರು. ತಾನೊಬ್ಬ ವೈದ್ಯ, ಇಂಗ್ಲೆಂಡ್‌ನಲ್ಲಿ ವಾಸವಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಮೇ 14ರಂದು ಚಾಟಿಂಗ್ ನಡೆಸಿದ್ದ ವೇಳೆ ಆತ, ಮಹಿಳೆಗೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ. ಮೇ 16ರಂದು ಮಹಿಳೆಯ ಮೊಬೈಲ್ ಸಂಖ್ಯೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ಹೇಳಿದ್ದ. ನಿಮಗೆ ಕೊರಿಯರ್ ಬಂದಿದ್ದು ಅದಕ್ಕೆ ಕಸ್ಟಮ್ ವೆಚ್ಚ ತಗುಲಲಿದೆ ಎಂದು ಹೇಳಿದ್ದನು.

ಆ ವ್ಯಕ್ತಿಯ ಮಾತು‌ ನಂಬಿದ ಮಹಿಳೆ ಮೇ 16ರಿಂದ 20ರವರೆಗೆ ಬೇರೆ ಬೇರೆ ಸಮಯದಲ್ಲಿ 6.50 ಲಕ್ಷ ಹಣ ವರ್ಗಾಯಿಸಿದ್ದರು. ಆ ಬಳಿಕ ವೈದ್ಯ ಮತ್ತು ಏರ್‌ಪೋರ್ಟ್ ಅಧಿಕಾರಿ ಸೋಗಿನ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆಯೇ ಮಹಿಳೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave A Reply

Your email address will not be published.

error: Content is protected !!