ಬಸ್ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ

0 1,540

ರಿಪ್ಪನ್‌ಪೇಟೆ : ಖಾಸಗಿ ಬಸ್ ಮತ್ತು ಓಮ್ನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಆಯನೂರು – ರಿಪ್ಪನ್‌ಪೇಟೆ ರಾಜ್ಯ ಹೆದ್ದಾರಿಯ ಅರಸಾಳು ಬಳಿ ನಡೆದಿದೆ.

ರಿಪ್ಪನ್‌ಪೇಟೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಬಸ್ ಮತ್ತು ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಮಾರುತಿ‌ ಓಮ್ನಿ ಕಾರಿನ ನಡುವೆ ಅರಸಾಳು ಕೆರೆ ಸಮೀಪದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.


ಓಮ್ನಿಯಲ್ಲಿ ಚಾಲಕನೊಬ್ಬನೆ ಇದ್ದು ಆತನಿಗೆ ಸಣ್ಣ-ಪುಟ್ಟ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಂತೆಗಳಲ್ಲಿ ಮಂಡಕ್ಕಿ ವ್ಯಾಪಾರ ನಡೆಸುತಿದ್ದ ಗರ್ತಿಕೆರೆ ಮೂಲದ ಕೃಷ್ಣ ಎಂಬ ವ್ಯಕ್ತಿ ಶಿವಮೊಗ್ಗದಿಂದ ಗರ್ತಿಕೆರೆಗೆ ತೆರಳುವಾಗ ಈ ಘಟನೆ ನಡೆದಿದೆ.

ಅಪಘಾತದಲ್ಲಿ ಓಮ್ನಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!