ಶಿವಮೊಗ್ಗ : ಚಲಿಸುತ್ತಿದ್ದ ರೈಲಿನ ಎಂಜಿನ್ ಕಳಚಿ ಕೆಲಕಾಲ ಭಯದ ವಾತಾವರಣ ಬಿದರೆ ಬಳಿ ನಡೆದಿದ್ದು ಭಾರಿ ಅನಾಹುತವೊಂದು ತಪ್ಪಿದೆ.
ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟ ರೈಲು
ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಎಂಜಿನ್ ಬೇರ್ಪಟ್ಟಿದೆ.
ಬೆಳಗ್ಗೆ 7 ಗಂಟೆಗೆ ಬಿದರೆ ಹಳೆ ರೈಲು ನಿಲ್ದಾಣ ಸಮೀಪಿಸುತ್ತಿದಂತೆ ಈ ಘಟನೆ ನಡೆದಿದ್ದು ಕಪ್ಲಿಂಗ್ ಸಡಿಲಗೊಂಡ ಹಿನ್ನೆಲೆ ಬೋಗಿಗಳಿಂದ ಎಂಜಿನ್ ಬೇರ್ಪಟ್ಟಿದೆ ಎನ್ನಲಾಗಿದೆ.
ಬಿದರೆ ಪ್ರದೇಶ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳಾಗಿಲ್ಲ.
ಬೋಗಿಗಳನ್ನು ಬಿಟ್ಟು ಸ್ವಲ್ಪ ದೂರ ಎಂಜಿನ್ ಚಲಿಸಿದೆ. ತಕ್ಷಣವೇ ಸಿಬ್ಬಂದಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಿದ್ದಾರೆ ನಂತರ ಬೆಂಗಳೂರು ಕಡೆಗೆ ರೈಲು ಹೊರಟಿದೆ. ಇದರಿಂದ ಕೆಲಕಾಲ ಪ್ರಯಾಣಿಕರು ಪರದಾಡಿದರು.