ಮಂಗನ ಕಾಯಿಲೆ ಬಗ್ಗೆ ತುರ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಮನ್ವಯ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಸಲಹೆ

0 600

ಹೊಸನಗರ : ಮಲೆನಾಡನ್ನು (Malenadu) ತಲ್ಲಣಗೊಳಸಿದ ಮಂಗನ ಕಾಯಿಲೆ (KFD) ಈಗ ಹರಡುವ ಸಮಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ (Health Department) ಹಾಗೂ ಅರಣ್ಯ ಇಲಾಖೆಯವರು (Forest Department) ತುರ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ರಶ್ಮಿ ಹಾಲೇಶ್ ಇಂದು ತಾಲೂಕು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಲಹೆ ನೀಡಿದರು.

2003-24ನೇ ಸಾಲಿನ ಇಲಾಖೆಗಳ ಅಂತರ್ ಇಲಾಖೆಗಳ ಸಮನ್ವಯ ಸಭೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಾಯಿ ಮರಣ ಹಾಗೂ ಶಿಶು ಮರಣ ಸೇವಾ ಸೌಲಭ್ಯದ ಬಗ್ಗೆ ಅತಿಸಾರ ಭೇದಿ ನಿಯಂತ್ರಣ ಬಗ್ಗೆ ನಿಮೋನಿಯಾ ತಡೆಗಟ್ಟುವ ಬಗ್ಗೆ ಪುರುಷ ಸಂತಾನ ನಿಯಂತ್ರಣ ಬಗ್ಗೆ ಸಮಿತಿ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ತಾಲೂಕ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಕುಮಾರ್ ತಾಲೂಕ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಶ್ ಕುಮಾರ್ ಸಭೆಯಲ್ಲಿ ಉಪಸ್ಥಿತಿಯಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಾಂಕ್ರಾಮಿಕ ರೋಗಗಳ ತಡೆ ಮುಂಜಾಗ್ರತ ಕ್ರಮ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಸೂಕ್ತ ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕಚೇರಿಯ ಅಧಿಕಾರಿಗಳಾದ ಹೇಮಂತ್ ರಾಜ್ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ವೀರಮ್ಮ, ಪಶುಸಂಗೋಪನ ಇಲಾಖೆಯ ಅನಿತಾ, ಅರಣ್ಯ ಇಲಾಖೆಯ ಯುವರಾಜ್, ಸಮಾಜ ಕಲ್ಯಾಣ ಇಲಾಖೆಯ ಸುನೀಲ್ ರಾಜ್, ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಗೂ ಆರ್ ಬಿ ಕೆ ಎಸ್ ವೈದ್ಯಾಧಿಕಾರಿಗಳು ಆಶಾ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್ ಕರಿಬಸಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮೇಶ್ ವಂದಿಸಿದರು.

Leave A Reply

Your email address will not be published.

error: Content is protected !!