ಶಿವಮೊಗ್ಗ: ಥಲಸ್ಸೇಮಿಯಾ (ಬೋನ್ ಮ್ಯಾರೋ) ಕಾಯಿಲೆಯಿಂದ ಬಳಲುತ್ತಿರುವ ನನ್ನ ಮಗನ ಚಿಕಿತ್ಸೆಗೆ ಸಹಾಯ ಹಸ್ತ ನೀಡಿ ಮಗುವಿನ ಜೀವ ಉಳಿಸುವಂತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರಲ್ಲಿ ಬಾಲಕನ ತಂದೆ ಹೆಚ್.ಎನ್. ರವೀಂದ್ರ ಮನವಿ ಮಾಡಿಕೊಂಡರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ವರ್ಕಾಟೆ ಗ್ರಾಮದಲ್ಲಿ ವಾಸವಾಗಿರುವ ನಮ್ಮ ಕುಟುಂಬ ಬಡತನದಲ್ಲಿದ್ದು, ನಮ್ಮ 11 ವರ್ಷದ ಮಗ ಸವಿನ್ ಹುಟ್ಟಿನಿಂದಲೂ ಥಲಸ್ಸೇಮಿಯಾ ಎಂಬ ಮಾರಣಾಂತಿಕ ರಕ್ತ ಉತ್ಪತ್ತಿ ಇಲ್ಲದ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿ 20 ದಿನಕ್ಕೊಮ್ಮೆ ಶಿವಮೊಗ್ಗಕ್ಕೆ ಬಂದು ರಕ್ತ ಹಾಕಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ಮಗನ ಶಸ್ತ್ರ ಚಿಕಿತ್ಸೆಗಾಗಿ ಸುಮಾರು 41 ಲಕ್ಷ ರೂ. ಖರ್ಚಾಗಲಿದೆ ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಯವರು ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬದವನಾಗಿದ್ದು, ನನಗೆ ಇಷ್ಟೊಂದು ಮೊತ್ತದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬಕ್ಕೆ ಧೈರ್ಯ ಮತ್ತು ಆರ್ಥಿಕವಾಗಿ ಸಹಾಯ ಮಾಡಲಿಚ್ಛಿಸು ವವರು ದಯಮಾಡಿ ಎನ್.ಆರ್. ಪುರದ ಇಂಡಿಯನ್ ಬ್ಯಾಂಕ್
ಅಕೌಂಟ್ ನಂ. 305522010000538, ಐಎಫ್‌ಎಸ್‌ಸಿ ಕೋಡ್ ಯುಬಿಐಎನ್-0930555ಗೆ ಗೂಗಲ್ ಅಥವಾ ಫೋನ್ ಪೇ ಬಳಸಿ (ಮೊ-9483813812) ಹಣ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು.
ಪುತ್ರ ಸವಿನ್ ಹಾಗೂ ಪತ್ನಿ ಉಪಸ್ಥಿತರಿದ್ದರು.