ಮಳಲಿ ಮಠದ ಶ್ರೀಗಳಿಗೆ ಭಕ್ತರಿಂದ ರಜತ ಕಿರೀಟ ಸಮರ್ಪಣೆ

0 511

ರಿಪ್ಪನ್‌ಪೇಟೆ: ಮಳಲಿ ಮಠದ (Malali Mutt) ಡಾ.ಗುರುನಾಗಭೂಷಣ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ಮಲೆನಾಡಿನ ಭಕ್ತ ಸಮೂಹ ರಜತ ಕಿರೀಟವನ್ನು ಮತ್ತು ಫಲಪುಷ್ಪದೊಂದಿಗೆ ಮಳಲಿಮಠದ ಡಾ.ಗುರುನಾಗಭೂಷಣ ಸ್ವಾಮೀಜಿಯವರಿಗೆ ಭಕ್ತಿಯಿಂದ ಸಮರ್ಪಿಸಿದರು.

ತೀರ್ಥಹಳ್ಳಿ (Thirthahalli) ತಾಲ್ಲೂಕಿನ ಕೋಣಂದೂರು (Konandur) ಸಮೀಪದ ಮಳಲಿ ಮಠದಲ್ಲಿ ಆಯೋಜಿಸಲಾದ ಕಾರ್ತಿಕ ದೀಪೋತ್ಸವ ಮತ್ತು ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಗವತ್ಪಾದರವರ ಸಮ್ಮುಖದಲ್ಲಿ ಭಕ್ತ ಸಮೂಹ ರಜತ ಕೀರಿಟವನ್ನು ಡಾ. ಗುರುನಾಗಭೂಷಣ ಶ್ರೀಗಳವರಿಗೆ ಭಕ್ತ ಸಮೂಹ ಭಕ್ತಿಯಿಂದ ಸಮರ್ಪಿಸಿದರು.

Leave A Reply

Your email address will not be published.

error: Content is protected !!