ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 56ನೇ ವರ್ಷದ ಗಣಪತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ವಿಶೇಷ ಪೂಜೆಯೊಂದಿಗೆ ಮಳೆಗಾಗಿ ಪ್ರಾರ್ಥಿಸಿದರು.
ವಿಘ್ನನಿವಾರಕನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಾರ್ಥಿಸಿದ ಕೆಲವೇ ಗಂಟೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಮಳೆಯು ಅರ್ಧಗಂಟೆಗಳ ಕಾಲ ಮಳೆ ಸುರಿದು ಭಕ್ತ ಸಮೂಹವನ್ನು ಮತ್ತು ರೈತನಾಗರೀಕರಲ್ಲಿ ಮಂದಹಾಸ ಮೂಡುವಂತಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಕರ್, ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ಎಂ.ಬಿ.ಮಂಜುನಾಥ, ಕಗ್ಗಲಿ ಲಿಂಗಪ್ಪ, ರವೀಂದ್ರ ಕೆರೆಹಳ್ಳಿ, ಹೆಚ್.ಎನ್.ಉಮೇಶ್, ಬೆಳಕೋಡು ಹಾಲಸ್ವಾಮಿಗೌಡರು, ಆಶೀಫ್ ಭಾಷಾ, ರಮೇಶ್ ಫ್ಯಾನ್ಸಿ, ಬಿ.ಎಸ್.ಎನ್.ಎಲ್.ಶ್ರೀಧರ, ಡಿ.ಈ.ರವಿಭೂಷಣ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ವೀರಭದ್ರಪ್ಪಗೌಡ ಕಲ್ಲೂರು, ಉಮಾಕರ್,ನಾಗರಾಜ ಕೆದಲುಗುಡ್ಡೆ, ಶ್ರೀನಿವಾಸ ಆಚಾರ್, ವೇದಾವತಿ, ದೇವರಾಜ್ ಪವಾರ್, ಗಣಪತಿ ಗವಟೂರು, ಆರ್.ರಾಘವೇಂದ್ರ, ಸಣ್ಣಕ್ಕಿ ಮಂಜು ಜಿ.ಡಿ.ಮಲ್ಲಿಕಾರ್ಜುನ ಇನ್ನಿತರರು ಹಾಜರಿದ್ದರು.
ಕಬ್ಬಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ರಿಪ್ಪನ್‌ಪೇಟೆಯ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಂಡು ಎಸೆತದಲ್ಲಿ ಪ್ರಥಮ ಮತ್ತು ಜಾವಲಿನ್‌ನಲ್ಲಿ ತೃತೀಯ ಸ್ಥಾನ, 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವ ಇವರ ಸಾಧನೆಗೆ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ.ದೇವರಾಜ್,ಮುಖ್ಯಶಿಕ್ಷಕ ರವಿ,ಸಹಶಿಕ್ಷಕರಾದ ಎಂ.ಎನ್.ಸಂದೇಶ, ದೈಹಿಕ ಶಿಕ್ಷಕ ವಿನಯ್ ಮತ್ತು ಸಿಬ್ಬಂದವರ್ಗ ಆಭಿನಂದಿಸಿದ್ದಾರೆ.