ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ರಾಜಕೀಯ ನಿವೃತ್ತಿ

0 214

ಶಿವಮೊಗ್ಗ : ಮಾಜಿ ಶಾಸಕ ವೈದ್ಯರತ್ನ ಡಾ. ಜಿ.ಡಿ. ನಾರಾಯಣಪ್ಪ ಅವರು ಸಕ್ರಿಯ ರಾಜಕೀಯದಿಂದ ದೂರ ಇರುವುದಾಗಿ ಪ್ರಕಟಿಸಿದ್ದಾರೆ.


ಹೊಸನಗರ ಕ್ಷೇತ್ರದಿಂದ 1999 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವದಿಂದ ಜನ ಮನ್ನಣೆಗಳಿಸಿದವರು. 85 ರ ಹರೆಯದ ಅವರು ಈಗಲೂ ವೈದ್ಯಕೀಯ ವೃತ್ತಿ ಮಾಡುತ್ತಿದ್ದು, ವಯಸ್ಸು ಮತ್ತು ಇತರೆ ಸಾಮಾಜಿಕ ಜವಾಬ್ದಾರಿಗಳ ಕಾರಣದಿಂದ ರಾಜಕೀಯ ಕ್ಷೇತ್ರದಿಂದ ನಿವೃತ್ತಿಯಾಗುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸಂಬಂಧಿಕರೂ ಆಗಿದ್ದ ನಾರಾಯಣಪ್ಪ ಅವರು, ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಸ್ವಯಂ ನಿವೃತ್ತಿ ಪಡೆದು ಬಂಗಾರಪ್ಪ ಅವರ ಅನುಯಾಯಿಯಾಗಿ ರಾಜಕೀಯ ಪ್ರವೇಶ ಮಾಡಿದ್ದರು. ಮಲೆನಾಡಿನ ಉತ್ತಮ ಶಸ್ತ್ರಚಿಕಿತ್ಸಕರೆಂದೇ ಖ್ಯಾತಿವೆತ್ತಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣೀಭೂತರಾಗಿದ್ದ ದಿ.ಎಸ್.ಬಂಗಾರಪ್ಪ ಅವರನ್ನು ಸ್ಮರಿಸಿರುವ ನಾರಾಯಣಪ್ಪ ಅವರು, ತಮ್ಮ ರಾಜಕೀಯ ಪಯಣದಲ್ಲಿ ಜತೆಯಾಗಿದ್ದ ರಾಜಕಾರಣಿಗಳು, ಗೆಳೆಯರು ಹಾಗೂ ಅಭಿಮಾನಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!