ಮುರುಘಾರಾಜೇಂದ್ರ ಮಠದ ಕಾರ್ತಿಕ ದೀಪೋತ್ಸವ ಸಮಿತಿ ಅಧ್ಯಕ್ಷರಾಗಿ ನಾಗರಾಜಗೌಡ ಹರತಾಳು ಆಯ್ಕೆ

0 429

ರಿಪ್ಪನ್‌ಪೇಟೆ: ಡಿಸೆಂಬರ್ 12 ರಂದು ನಡೆಯುವ 2023ನೇ ಸಾಲಿನ ಮುರುಘಾರಾಜೇಂದ್ರ ಮಠದ ಕಾರ್ತಿಕ ದೀಪೋತ್ಸವ ಸಮಿತಿಯ ಅಧ್ಯಕ್ಷರಾಗಿ ನಾಗರಾಜಗೌಡ ಹರತಾಳು, ಪ್ರಧಾನ ಕಾರ್ಯದರ್ಶಿಯಾಗಿ ದೇವೇಂದ್ರಪ್ಪಗೌಡ ನೆವಟೂರು ಆಯ್ಕೆಯಾಗಿದ್ದಾರೆ.

ಆನಂದಪುರ ಮುರುಘಾರಾಜೇಂದ್ರ ಮಠದಲ್ಲಿ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಮತ್ತು ಕಂಚಿನ ರಥೋತ್ಸವ ಭಾವೈಕ್ಯ ಧರ್ಮ ಸಮಾರಂಭದ ಪೂರ್ವ ಸಿದ್ದತಾ ಸಭೆಯಲ್ಲಿ 2023ನೇ ಸಾಲಿನ ದೀಪೋತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಜೆ.ಎಸ್.ಚಂದ್ರಪ್ಪ ರಿಪ್ಪನ್‌ಪೇಟೆ ಇವರನ್ನು ಖಜಾಂಚಿಯನ್ನಾಗಿ ಹಾಗೂ ಸ್ವಾಗತ ಸಮಿತಿ, ದಾಸೋಹ ಸಮಿತಿ ಪ್ರಚಾರ ಸಮಿತಿ ಹೀಗೆ ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿತ್ರಟ್ಟೆ ಮಠದ ಲಿಂಗರಾಜಯ್ಯ, ಜಯಶೀಲಗೌಡ ಹರತಾಳು, ಎಲ್.ವೈ.ದಾನೇಶಪ್ಪಗೌಡ,
ಹೆಚ್.ಎಂ.ವರ್ತೇಶಗೌಡ, ಆಚಾಪುರ ಶಾಂತಕುಮಾರ್, ಬಿ.ಸಿ.ನಿಜಲಿಂಗಪ್ಪಗೌಡ, ಲಕ್ಕವಳ್ಳಿ ಮುರುಗೇಶಪ್ಪಗೌಡ, ಕೆ.ಆರ್.ರಾಜು ಖೈರಾ, ಮುರುಗೇಶಪ್ಪಗೌಡ ಖೈರಾ, ಶಿವಕುಮಾರಗೌಡ ಚನ್ನಕೊಪ್ಪ, ದುಶ್ಯಂತಗೌಡ ಕೋಣೆಹೊಸೂರು, ಶಿವಕುಮಾರಗೌಡ ದೂನ, ಮಲ್ಲಂದೂರು ನಾಗಭೂಷಣ ಇನ್ನಿತರ ಸುತ್ತಮುತ್ತಲಿನ ಸದ್ಭಕ್ತರು ಭಾಗವಹಿಸಿದರು.

ಕಾರ್ತಿಕ ದೀಪೋತ್ಸವಕ್ಕೆ ಹೊಂಬುಜ ಶ್ರೀಗಳಿಗೆ ಆಹ್ವಾನ

ರಿಪ್ಪನ್‌ಪೇಟೆ: ಡಿಸೆಂಬರ್ 12 ರಂದು ಆಯೋಜಿಸಲಾಗಿರು ಮುರುಘಾರಾಜೇಂದ್ರ ಮಠದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರ ಕೀರ್ತೀ ಭಟ್ಟಾರಕ ಮಹಾಸ್ವಾಮಿಜಿಯವರನ್ನು ದೀಪೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜಗೌಡ ಹರತಾಳು, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪಗೌಡ ನೆವಟೂರು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಜೆ.ಎಸ್.ಚಂದ್ರಪ್ಪ, ಹೆಚ್.ಎಂ.ವರ್ತೇಶಗೌಡರು, ಹಾಜರಿದ್ದರು.

Leave A Reply

Your email address will not be published.

error: Content is protected !!