Shivamogga | ಮುಸ್ಲಿಂ ಗೂಂಡಾಗಳ ವರ್ತನೆ ಮಿತಿ ಮೀರಿದೆ, ಹಿಂದೂ ಸಮಾಜ ತಿರುಗಿ ಬಿದ್ರೆ ಗತಿ ಏನು ಎಂದು ಅವ್ರು ಯೋಚಿಸಿಲ್ಲ ; ಕೆ.ಎಸ್. ಈಶ್ವರಪ್ಪ

0 4,346

ಶಿವಮೊಗ್ಗ: ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳ ವರ್ತನೆ ಮಿತಿ ಮೀರಿದ್ದು, ಹಿಂದೂ ಸಮಾಜ ಇದಕ್ಕೆ ಜಗ್ಗುವುದಿಲ್ಲ ಬಗ್ಗುವುದಿಲ್ಲ. ಹಿಂದೂ ಸಮಾಜ ತಿರುಗಿ ಬಿದ್ದರೆ ಗತಿ ಏನು ಎಂದು ಮುಸ್ಲಿಂ ಸಮಾಜ ಯೋಚಿಸಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ರೋಶದಿಂದ ಗುಡುಗಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ಮುಸ್ಲಿಂರ ಹಬ್ಬಗಳು ಅತ್ಯಂತ ಶಾಂತಿಯತವಾಗಿಯೇ ನಡೆದಿವೆ. ಲಕ್ಷಾಂತರ ಜನ ಭಾಗವಹಿಸಿದ್ದ ಗಣಪತಿ ಹಬ್ಬದಲ್ಲಿ ಒಂದು ಚಿಕ್ಕ ಕಹಿ ಘಟನೆಯೂ ನಡೆಯಲಿಲ್ಲ. ಆದರೆ ಈದ್‌ಮಿಲಾದ್ ಮೆರವಣಿಗೆಯಲ್ಲಿ ಶಾಂತಿಗೆ ಹೆಸರಾಗಿದ್ದ ಶಾಂತಿನಗರ (ರಾಗಿಗುಡ್ಡ) ದಲ್ಲಿ ಆಶಾಂತಿಯ ವಾತಾವರಣ ನಿನ್ನೆ ನಡೆದಿದೆ. ಇದಕ್ಕೆ ಮಸ್ಲಿಂ ಗೂಂಡಾಗಳು ಮತ್ತು ಪೊಲೀಸರು ಹಾಗೂ ಸರ್ಕಾರವೇ ಕಾರಣವಾಗಿದೆ ಎಂದರು.


ಮುಸ್ಲಿಮರು ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ನಗರದ ತುಂಬಾ ಕೈಯಲ್ಲಿ ತಲವಾರುಗಳನ್ನು ಇಟ್ಟುಕೊಂಡು ಸಾಗಿದರು. ಅನೇಕ ಕಡೆ ತಲವಾರುಗಳನ್ನೇ ತೂಗು ಹಾಕಿದ್ದರು. ತಲವಾರು ಇಟ್ಟುಕೊಂಡು ಯಾರನ್ನು ಇವರು ಹೆದರಿಸುತ್ತಿದ್ದಾರೆ. ಹಿಂದೂ ಸಮಾಜಕ್ಕೆ ಎಚ್ಚರಿಕೆ ಕೊಡುತ್ತಿದ್ದಾರೆಯೇ. ತಲವಾರು ಪ್ರದರ್ಶನ ಬೇಕಿತ್ತಾ. ಕೋಲಾರದಲ್ಲೂ ಇದೇ ರೀತಿ ಇತ್ತು. ಅಲ್ಲಿನ ಸಂಸದರು ಈ ತಲವಾರುಗಳನ್ನು ತೆಗೆಸಿದ್ದರು. ಶಿವಮೊಗ್ಗದಲ್ಲಿ ಏಕೆ ತೆಗೆಯಲಿಲ್ಲ. ತಲವಾರು ಹಿಡಿಯಲು ಅವಕಾಶ ಕೊಟ್ಟಿದ್ದಾದರೂ ಏಕೆ, ಮೊದಲು ಅವರನ್ನು ಬಂಧಿಸಬೇಕಿತ್ತು ಎಂದರು.


ಟಿಪ್ಪು ಸುಲ್ತಾನ್, ಹೈದರಾಲಿ, ಔರಂಗಜೇಬ್ ಇವರು ದೇಶದ್ರೋಹಿಗಳು. ಇವರ ಫೋಟೋಗಳನ್ನು, ಕಟೌಟ್‌ಗಳನ್ನು ಏಕೆ ಹಾಕಬೇಕಿತ್ತು? ಹಿಂದೂ ಸಮಾಜಕ್ಕೆ ಭಯ ಹುಟ್ಟಿಸುವ ಕೆಲಸದಲ್ಲಿ ಇವರು ತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರವಿದೆ. ತಮಗೆ ರಕ್ಷಣೆ ಇದೆ ಎಂದುಕೊಂಡಿದ್ದಾರೆ. ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಲಿ ಎಂದರು.


ರಾಗಿಗುಡ್ಡದಲ್ಲಿ ಹಿಂದೂಗಳ ಮನೆ ಮೇಲೆ ವ್ಯಕ್ತಿಗಳ ಮೇಲೆ ಹಲ್ಲೆಯಾಗಿರುವುದನ್ನು ನೋಡಿದರೆ ಆಕ್ರೋಶವಾಗುತ್ತದೆ.ದೊಡ್ಡ ದೊಡ್ಡ ಕಲ್ಲುಗಳಿಂದ ಮನೆಗಳಿಗೆ ಗ್ಲಾಸ್ ಗಳಿಗೆ ಹೊಡೆದು ಪುಡಿಪುಡಿ ಮಾಡಿದ್ದಾರೆ. ಅನೇಕ ಮನೆಗಳಲ್ಲಿ ರಕ್ತ ಚೆಲ್ಲಿದೆ. ಹೆಣ್ಣುಮಕ್ಕಳ ತಲೆಗಳು ಒಡೆದುಹೋಗಿವೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕಪ್ಪು ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡು ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕೇವಲ ಹಿಂದೂಗಳ ಮನೆಗಳೇ ಇವರಿಗೆ ಗುರಿಯಾಗಿವೆ ಈ ಸರ್ಕಾರಕ್ಕೆ ಮುಸ್ಲಿಂರ ರಕ್ಷಣೆ ಬೇಕಾಗಿದೆ. ಹಿಂದೂಗಳ ರಕ್ಷಣೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅವರು ಸರ್ಕಾರಕ್ಕೆ ಹೆದರುತ್ತಿದ್ದಾರೆ. ಪೊಲೀಸರಿಗೆ ಗಾಯಗಳಾದರೂ ಕೂಡ ತಿಳಿಸುತ್ತಿಲ್ಲ. ಪೊಲೀಸರನ್ನು ಕೂಡ ಅವರು ಬಿಟ್ಟಿಲ್ಲ. ಸಾಲದ್ದಕ್ಕೆ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ ಗಲಾಟೆ ನಡೆಯದ ಪ್ರದೇಶವಾದ ಶಿವಮೊಗ್ಗ ಸಿಟಿಗೂ ಇದನ್ನು ವಿಸ್ತರಿಸಿದ್ದಾರೆ. ವ್ಯಾಪಾರಸ್ತರು ಏನು ಮಾಡಬೇಕು. ತಕ್ಷಣವೇ 144 ಸೆಕ್ಷನ್ ತೆಗೆದುಹಾಕಬೇಕು ಎಂದರು.


ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಶಿವಮೊಗ್ಗದಲ್ಲಿ ಈದ್‌ಮಿಲಾದ್ ಮೆರವಣಿಗೆಗೆ ಅನುಮತಿ ಕೊಡುವಾಗ ಯಾವ ನಿರ್ಬಂಧವನ್ನೂ ಹೇರಲಿಲ್ಲ. ಆದರೆ ಗಣಪತಿ ಮೆರವಣಿಗೆಗೆ ಮಾತ್ರ ನಿರ್ಬಂಧ ಹೇರಲಾಗಿತ್ತು. ಈ ತಾರತಮ್ಯ ಏಕೆ? ಕೇವಲ ಕೆಲವರನ್ನು ಬಂಧಿಸಿದರೆ ಸಾಲದು.ಸಾವಿರಕ್ಕೂ ಹೆಚ್ಚು ಮುಸ್ಲಿಂ ಯುವಕರು ಈ ಗಲಾಟೆಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರನ್ನೂ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

ವಕೀಲರಾಗಿರುವ ಶ್ರೀಪಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾಧ್ಯಮಗಳ ವಿರುದ್ಧವೇ ಟೀಕೆ ಮಾಡಿದ್ದಾರೆ. ದೃಶ್ಯ ಮಾಧ್ಯಮಗಳು ನಿನ್ನೆಯ ಘಟನೆಯನ್ನು ವಿಕೃತವಾಗಿ ತೋರಿಸಿದ್ದಾರೆ. ಶಿವಮೊಗ್ಗ ಕೊತಕೊತ ಕುದಿಯುತ್ತಿದೆ ಎಂದು ಸುಳ್ಳು ಸುಳ್ಳಾಗಿ ತೋರಿಸಿದ್ದಾರೆ. ಆ ಚಾನೆಲ್‌ಗಳ ವಿರುದ್ಧ ಸ್ವಯಂ ಕೇಸು ದಾಖಲಿಸಬೇಕು ಎಂದಿದ್ದಾರೆ. ಆದರೆ ಈ ಶ್ರೀಪಾಲ್‌ಗೆ ಗೊತ್ತಿರಲಿ. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ. ಇರುವ ಸತ್ಯ ಸಂಗತಿಗಳನ್ನು ತೋರಿಸುತ್ತಾರೆ. ಈ ಶ್ರೀಪಾಲ್ ರಾಷ್ಟ್ರದ್ರೋಹಿಯಾಗಿದ್ದಾನೆ. ಮೊದಲು ಈತನನ್ನು ಬಂಧಿಸಬೇಕು.
– ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

ತಲವಾರ್ ಹಿಡಿಯುವುದು ನಮಗೂ ಗೊತ್ತಿದೆ :

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹಿಂದೂಗಳು ಶಾಂತಿಪ್ರಿಯರು. ಅವರ ಸಹನೆಯನ್ನು ದೌರ್ಬಲ್ಯ ಎಂದುಕೊಳ್ಳಬಾರದು. ಒಂದುಪಕ್ಷ ಹಿಂದುಗಳು ತಿರುಗಿ ಬಿದ್ದರೆ ಮುಸ್ಲಿಂರ ಗತಿ ಏನು ಎಂದು ಹೇಳಿದರು.

ನಾವು ಅಂದರೆ ಹಿಂದೂಗಳು ಶಾಂತಿಯಿಂದಲೇ ಇರುತ್ತೇವೆ.ಆದರೆ ಮುಸ್ಲಿಮರು ಮಾತ್ರ ಶಾಂತಿಯನ್ನು ಕಳೆದುಕೊಳ್ಳುತ್ತಾರೆ. ನಮ್ಮ ಸಹನೆಯನ್ನು ಅವರು ಪರೀಕ್ಷಿಸಬಾರದು. ಒಂದು ಪಕ್ಷ ಹಿಂದುಗಳು ತಿರುಗಿ ಬಿದ್ದರೆ ಅವರ ಗತಿ ಏನು? ಎಷ್ಟೋ‌ ಕಡೆ ಹಿಂದೂಗಳೇ ಇರುವ ಓಣಿಯಲ್ಲಿ ಒಂದೆರಡು ಮುಸ್ಲಿಂರ ಮನೆಗಳು ಇಲ್ಲವೇ ? ಎಂದು ಪ್ರಶ್ನೆ ಮಾಡಿದರು.

ತಲವಾರ್ ಹಿಡಿಯುವುದು ನಮಗೂ ಗೊತ್ತಿದೆ. ನಾವು ಆಯುಧವನ್ನೇ ಪೂಜೆ ಮಾಡುವವರು. ನಮಗೆ ಆಯುಧಗಳ ಬಗ್ಗೆ ಅವರು ಹೇಳಿಕೊಡಬೇಕಾಗಿಲ್ಲ. ನಮಗೆ ಆಯುಧವನ್ನು ಹಿಡಿಯುವುದೂ ಗೊತ್ತು ಸಂದರ್ಭ ಬಂದಾಗ ಅದನ್ನು ಬಳಸುವುದೂ ಗೊತ್ತು. ಆದರೆ ಹಿಂದೂಗಳು ಎಂದೂ ಕೆರಳುವುದಿಲ್ಲ. ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹಿಂದೂಗಳ ಮನೆಗಳಿಗೆ ನುಗ್ಗಿ ಹೊಡೆದಿದ್ದಾರೆ. ಶಿವಮೊಗ್ಗವೇ ಭಯದ ವಾತಾವರಣದಲ್ಲಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ಗಲಭೆಗೆ ಕಾರಣರಾದವರನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿ.ಎಸ್. ಅರುಣ್, ರುದ್ರೇಗೌಡರು, ಪ್ರಮುಖರಾದ ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ ಗಿರೀಶ್ ಪಟೇಲ್, ಟಿ.ಡಿ. ಮೇಘರಾಜ್, ಜಗದೀಶ್, ಕಾಂತೇಶ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಸುನೀತಾ-ಅಣ್ಣಪ್ಪ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!