ಮೂಲಭೂತ ಸೌಕರ್ಯ ಒದಗಿಸುವಂತೆ ಸಚಿವರಿಗೆ ಮನವಿ

0 299

ಸೊರಬ: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸೊರಬ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್.ಮಧು ಬಂಗಾರಪ್ಪನವರಿಗೆ (Madhu Bangarappa) ತಾಲೂಕು ಕಂದಾಯ ಇಲಾಖೆ (Revenue Department) ನೌಕರರ ಸಂಘದ ಅಧ್ಯಕ್ಷ ವಿ.ಎಲ್ ಶಿವಪ್ರಸಾದ್ ಒತ್ತಾಯಿಸಿದರು.

ಸೊರಬ (Soraba) ತಾಲೂಕಿನ ರಂಗಮಂದಿರದಲ್ಲಿ ಸಚಿವ ಎಸ್ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಿ, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಎಲ್ಲ ಮಹತ್ವಕಾಂಕ್ಷಿಯ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೇಂದ್ರದಲ್ಲಿ ವಸತಿಗೃಹ ಹಾಗೂ ಕಚೇರಿ, ಲ್ಯಾಪ್‌ಟಾಪ್, ಮೊಬೈಲ್, ಪ್ರಿಂಟರ್, ಮತ್ತು ಅಗತ್ಯವಾಗಿರುವ ಸೌಲಭ್ಯವನ್ನು ಕಲ್ಪಿಸುವ. ಜೊತೆಗೆ ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ 16ಎ ಅನ್ನು ಪುನರ್ ಸ್ಥಾಪಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಸ್ ಮಧು ಬಂಗಾರಪ್ಪ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಚಿವ ಎಸ್ ಮಧು ಬಂಗಾರಪ್ಪನವರಿಗೆ ತಾಲೂಕು ಕಂದಾಯ ಇಲಾಖೆ ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಯಶವಂತ್, ಕಂದಾಯ ಇಲಾಖೆ ನೌಕರರಾದ ಮಾರುತಿ, ಜಂಗಪ್ಪ ಗೌಡ ಬಿರಾದರ್, ಓಫಿ, ಸಲೀಂ, ವೀರೇಂದ್ರ, ರಾಜೇಶ್ ಬಾಬು, ವಿನಯ್, ಸಮೀರ್, ಮಂಜಪ್ಪ, ಶ್ರೀಶೈಲ್ ಬಗಲಿ, ಸೇರಿದಂತೆ ಕಂದಾಯ ಇಲಾಖೆ ಅನೇಕ ನೌಕರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!