ಮೂಲವ್ಯಾಧಿ ಉಚಿತ ಚಿಕಿತ್ಸಾ ಶಿಬಿರ

0 549

ಸೊರಬ : ಗುದದ್ವಾರದಲ್ಲಿ ಕಾಣಿಸಿಕೊಳ್ಳುವ ಮೂಲವ್ಯಾಧಿ ಹೆಚ್ಚು ಹಿಂಸೆ ನೀಡುವ ಸಮಸ್ಯೆಯಾಗಿದೆ. ಇದನ್ನು ಆಹಾರದಿಂದ ಹೇಗೆ ನಿಯಂತ್ರಿಸಬಹುದು ಎಂಬುವುದಕ್ಕೆ ಡಾ. ಸಿದ್ದನಗೌಡ ಪಾಟೀಲ್ ಸಲಹೆ ನೀಡಿದರು.

ಚಂದ್ರಗುತ್ತಿಯ ಶಿವಕೃಪಾ ಕ್ಲಿನಿಕ್ ನಲ್ಲಿ ವಿಶ್ವ ಮೂಲವ್ಯಾಧಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಮೂಲ್ಯವಾಧಿ ಪೈಲ್ಯ್, ಫಿಸ್ತುಲಾ, ಫಿಷರ್, ಸಮಸ್ಯೆಗಳ ಬಗ್ಗೆ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೂಲವ್ಯಾಧಿಗೆ ಸಂಬಂಧಿಸಿದ ಹೆಚ್ಚಿನ ತೊಡಕುಗಳನ್ನು ತಡೆಗಟ್ಟುವುದು ಭಾರತೀಯ ಮೂಲವ್ಯಾಧಿ ಆಹಾರದ ಯೋಜನೆಯ ಮುಖ್ಯ ಗುರಿಯಾಗಿದೆ. ಆದ್ದರಿಂದ ಮೂಲವ್ಯಾಧಿಯನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ಕೆಳಗಿನ ಆಹಾರವನ್ನು ಸೇವಿಸಬೇಕು. ಎಂದರು.

ಮೂಲವ್ಯಾಧಿ ಅಥವಾ ಕರುಳಿನ ಸಹಲಕ್ಷಣದಿಂದ ಬಳಲುತ್ತಿದ್ದರೆ, ನಿಮ್ಮ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಮತ್ತು ಆಹಾರ ತಂಡವು ನಿಮಗೆ ಉತ್ತಮ ಚಿಕಿತ್ಸೆ ಮತ್ತು ಆಹಾರಕ್ರಮದೊಂದಿಗೆ ತ್ವರಿತವಾಗಿ ಚಿಕಿತ್ಸೆ ಪಡೆಯಬಹುದಾಗಿ ತಿಳಿಸಿದರು.

ಶಿವಕೃಪಾ ಕ್ಲಿನಿಕ್ ಡಾ ಹರ್ಷ ಮಾತನಾಡಿ ಚಂದ್ರಗುತ್ತಿಯಲ್ಲಿ ಮೂಲವ್ಯಾಧಿ ಚಿಕಿತ್ಸೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಇಂತಹ ಮೂಲವ್ಯಾಧಿ ಶಿಬಿರ ಆಯೋಜಿಸಲಾಗುತ್ತಿದೆ. ಎಂದರು.

ಡಾ. ವಿಶ್ವನಾಥ್ ಅರಳಿಕಟ್ಟೆ ಮಾತನಾಡಿ ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ಗ್ರಾಮೀಣ ಭಾಗದ ಜನರಿಗೆ ಸೇವಾ ಮನೋಭಾವನೆಯಿಂದ ಮೂಲ್ಯವಾದಿ ಚಿಕಿತ್ಸೆ ಶಿಬಿರ ಆಯೋಜಿಸಿ ಮೂಲವ್ಯಾಧಿ ತಡೆಗಟ್ಟುವ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ಶ್ಲಾಘನೀಯ ಎಂದರು.

ಶಿಬಿರದಲ್ಲಿ 22ಕ್ಕೂ ಹೆಚ್ಚು ಜನರಿಗೆ ಉಚಿತ ಮೂಲ್ಯವಾಧಿ ಚಿಕಿತ್ಸೆ ನೀಡಲಾಯಿತು. ಡಾ.ಹರ್ಷ, ಡಾ. ವಿಶ್ವನಾಥ್ ಅರಳಿಕಟ್ಟೆ, ಡಾ. ಶಿವಾನಂದ್ ಸಿ.ಎನ್, ಪ್ರಮುಖರಾದ ಯಶ್ವಂತಪ್ಪ ಮಾಸ್ತರ್, ಶ್ರೀಧರ್ ಗೌಡ, ಉಮಾಕಾಂತ ಗೌಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!