ಮೇ 10 ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

0 38

ಶಿವಮೊಗ್ಗ: ಮೇ 10ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧವನ್ನು ಹೇರಲಾಗಿದೆ.

ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತ ವಿಶ್ವ ವಿಖ್ಯಾತವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಸರ್ಕಾರಿ ರಜೆ ನೀಡಲಾಗಿದೆ. ರಜಾ ದಿನವಾದ್ದರಿಂದ ಮತದಾನ ಮಾಡದೇ ಜನರು ಪ್ರವಾಸಕ್ಕೆ ಹೊರಡುತ್ತಾರೆ ಎಂಬ ಕಾರಣಕ್ಕಾಗಿ ಜೋಗ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಿದ್ದಾರೆ.


ಜಲಪಾತ ವೀಕ್ಷಣೆ ನಿರ್ಬಂಧದ ಕುರಿತು ಜಲಪಾತದ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಫ್ಲೆಕ್ಸ್‌ವೊಂದನ್ನು ಹಾಕಿದೆ. ಈ ಮೂಲಕ ಮತದಾನಕ್ಕೆ ಜಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

Leave A Reply

Your email address will not be published.

error: Content is protected !!