ಶಿವಮೊಗ್ಗ : ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮೀಜಿಯವರಿಂದ ದತ್ತರಾಜ ದೇಶಪಾಂಡೆಯವರ ಸನ್ಯಾಸಪೂರ್ವಕ ಶಿಷ್ಯ ಪರಿಗ್ರಹಣ ಸಮಾರಂಭವನ್ನು ಮೇ 18ರಿಂದ ಮೇ 22ರವರೆಗೆ ಕೂಡಲಿಯಲ್ಲಿ ನಡೆಯಲಿದೆ ಎಂದು ಹೆಬ್ಬಳ್ಳಿಯ ದತ್ತಾವಧೂತ ಶ್ರೀಗಳು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಇಂದು ಸಂಜೆ 5 ಗಂಟೆಗೆ ಉಭಯ ಶ್ರೀಗಳ ಪುರ ಪ್ರವೇಶ
ನಡೆಯಲಿದೆ. ಮೇ 18ರಂದು ಬೆಳಗ್ಗೆ 9ರಿಂದ 12.30ರವರೆಗೆ ಗಣಪತಿ ಪೂಜಾ, ಸಂಕಲ್ಪ, ಕಲಶಸ್ಥಾಪನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಸಭಾ ಕಾರ್ಯಕ್ರಮ, ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದರು.
ಮೇ 1 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ವೇದ ಪಾರಾಯಣ ಹಾಗೂ ದೈವ, ಋಷಿ, ದಿವ್ಯ ಮನುಷ್ಯ
ಶ್ರಾದ್ಧಗಳು ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಸಭಾ
ಕಾರ್ಯಕ್ರಮ ನಡೆಯಲಿದೆ. ಮೇ 20ರಂದು ಬೆಳಗ್ಗೆ 9ರಿಂದ ವೇದ ಪಾರಾಯಣ ಹಾಗೂ ಭೂತ, ಪಿತೃ, ಮಾತೃ ಆತ್ಮ ಶ್ರಾದ್ಧಗಳು ನಡೆಯಲಿವೆ ಎಂದರು.
ಮೇ 21ರಂದು ಬೆಳಗ್ಗೆ 9ರಿಂದ ವೇದ ಪಾರಾಯಣ ಹಾಗೂ ಅನುಜ್ಞಾ ಪ್ರಾರ್ಥನೆ, ಪುಣ್ಯಾಹವಾಚನ, ವಪನ ಸಂಕಲ್ಪ, ಮಧ್ಯಾಹ್ನ 12.30ಕ್ಕೆ ಸಭಾ ಕಾರ್ಯಕ್ರಮ, ಸಂಜೆ 5ಕ್ಕೆ ಅಗ್ನಿ ಪ್ರತಿಷ್ಠಾಪನ, ಪೂರ್ಣಾಹುತಿ, ಬ್ರಹ್ಮ ವಿಚಾರ ಹಾಗೂ ರಾತ್ರಿ ಜಾಗರಣೆ ನಡೆಯಲಿದೆ ಎಂದರು.
ಮೇ 22ರಂದು ಬೆಳಗ್ಗೆ 7ರಿಂದ ವಿವಿಧ ಹೋಮ,
ಮಧ್ಯಾಹ್ನ 1 ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸಂಜೆ
ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.