ಮೊರಾರ್ಜಿ, ನವೋದಯ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ
ರಿಪ್ಪನ್‌ಪೇಟೆ: ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು 5ನೇ ತರಗತಿಯಲ್ಲೇ ಇದನ್ನು ಧೈರ್ಯದಿಂದ ಎದುರಿಸಲು ಮಕ್ಕಳಿಗೆ ತಜ್ಞ ಶಿಕ್ಷಕ ವರ್ಗ ಸನ್ನದರಾಗಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಗುಳಕೊಪ್ಪ ಮಂಜಪ್ಪ ಹೇಳಿದರು.

ಹೊಂಬುಜ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಅವರಣದಲ್ಲಿನ ಶ್ರೀರಂಗರಾವ್ ರಂಗಮಂದಿರದಲ್ಲಿ ಆಯೋಜಿಸಲಾದ ತೃತೀಯ ವರ್ಷದ ನವೋದಯ ಮತ್ತು ಮೊರಾರ್ಜಿ ಶಾಲೆ ಉಚಿತ ತರಬೇತಿ ಶಿಬಿರ ಉದ್ಘಾಟನೆ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ ಸಲಹೆ ಸೂಚನೆಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆಯಾಗುವುದೆಂದು ಹೇಳಿ, ಕಳೆದ ಎರಡು ವರ್ಷದಿಂದ ನವೋದಯ ಮತ್ತು ಮೊರಾರ್ಜಿ ಪರೀಕ್ಷಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಶಾಲೆಯ ಪರಿಚಯ ಆಯ್ಕೆ ಪ್ರಕ್ರಿಯೆ ಮಾಹಿತಿ ಕೋಚಿಂಗ್ ಮಾದರಿ ಪರೀಕ್ಷೆ ಮಾದರಿ ಸಾಮಗ್ರಿಗಳ ಸಮಯ ನಿರ್ವಹಣೆ ಮತ್ತು ಇತರ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡುತ್ತಿರುವ ಶಿಕ್ಷಕ ಸಮೂಹವನ್ನು ಶ್ರೀಗಳು ಪ್ರಶಂಸಿಸಿದರು.

ಈ ಶಿಬಿರದಲ್ಲಿ ಕೋಣಂದೂರು ಎನ್.ಇ.ಎಸ್. ವಿದ್ಯಾಸಂಸ್ಥೆಯ ಶಿಕ್ಷಕರಾದ ಸಂತೋಷ, ಶಿಬಿರದ ಸಂಚಾಲಕ ಪ್ರಕಾಶ ಜೋಯ್ಸ್, ಅಭಿಷೇಕ್, ಸಂಜಯ್, ವಿನಯ್, ಶ್ರೀಕಾಂತ್, ಲಕ್ಷ್ಮಣ, ಸಂತೋಷ, ನವೀನ್, ಪ್ರಶಾಂತ, ಆದಿತ್ಯ, ದಿನೇಶ್, ಶಿವಕುಮಾರ್, ವಿ.ಪ್ರಶಾಂತ, ಅಕ್ಷತಾ ಮಇನ್ನಿತರರು ಹಾಜರಿದ್ದರು.
