ಯಕ್ಷಗಾನವನ್ನು ಶ್ರದ್ಧೆಯಿಂದ ಸಾಂಪ್ರದಾಯಿಕವಾಗಿ ಕಲಿತು ಪ್ರದರ್ಶಿಸಬೇಕು

0 406

ಹೊಸನಗರ : ಯಕ್ಷಗಾನವನ್ನು (Yakshagana) ಶ್ರದ್ಧೆಯಿಂದ ಸಾಂಪ್ರದಾಯಿಕವಾಗಿ ಕಲಿತು ಪ್ರದರ್ಶಿಸಬೇಕೆಂದು ಯಕ್ಷಗಾನ ಕಲಾವಿದ ಗಣಪತಿ ಪುರಪ್ಪೆಮನೆ ಹೇಳಿದರು.

ಕಾರಣಗಿರಿ (Karanagiri) ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ ರಾಷ್ಟ್ರೋತ್ಥಾನ ಸಂಸ್ಕೃತಿ ಭವನದಲ್ಲಿ ಆರಂಭವಾದ ಯಕ್ಷಗಾನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯಕ್ಷಗಾನವನ್ನು ಶುದ್ಧವಾಗಿ ಉಳಿಸಿಕೊಳ್ಳಬೇಕಾಗಿದೆ. ಜನರಲ್ಲೂ ಅದೇ ಅಭಿರುಚಿಯನ್ನು ಬೆಳೆಸಬೇಕು. ಕೆಲವೇ ಕೆಲವರು ಕೀಳ ಅಭಿರುಚಿಯನ್ನು ಬಯಸುವ ಕಾರಣಕ್ಕೆ ಯಕ್ಷಗಾನ ಕಲೆಗೆ ಅಪಚಾರ ಎಸಗದಂತೆ ಎಚ್ಚರ ವಹಿಸಬೇಕೆಂದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ಕಾರ್ಯದರ್ಶಿ ಹನಿಯರವಿ ಉಪಸ್ಥಿತರಿದ್ದರು.
ಕು|| ವಿನುತಾ ಸ್ವಾಗತಿಸಿ, ಕಾವ್ಯ ವಂದಿಸಿದರು.

Leave A Reply

Your email address will not be published.

error: Content is protected !!