ರಿಪ್ಪನ್‌ಪೇಟೆ ಗಣೇಶನ ಜಲಸ್ತಂಭನ ; ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ ಬೇಳೂರು
ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 11 ದಿನಗಳ ಕಾಲ ಪ್ರತಿಷ್ಠಾಪಿಸಲಾದ 56ನೇ ವರ್ಷದ ಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ಸಂಜೆ ಅತ್ಯಂತ ವಿರಾಜಮಾನವಾಗಿ ಮೆರವಣಿಗೆಯಲ್ಲಿ ಸಾಗಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಗವಟೂರು ತಾವರೆಕೆರೆಯಲ್ಲಿ ಜಲಸ್ತಂಭನಗೊಂಡಿತು.

ಸತತ 19 ಗಂಟೆಗಳ ಕಾಲ ಇಲ್ಲಿನ ಗಣಪನ ರಾಜಬೀದಿ ಉತ್ಸವದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಅಭಿಮಾನಿಗಳೊಂದಿಗೆ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿಯುತ್ತಿರುವುದು ಆಕರ್ಷಣೆಯಾಯಿತು. ಅಲ್ಲದೆ ಶಾಸಕರು ಹೆಜ್ಜೆ ಹಾಕಿ ಕುಣಿಯುವುದನ್ನು ಕಂಡು ಭಕ್ತ ಸಮೂಹ ಉತ್ಸವದಲ್ಲಿ ಡಿಜೆ ಹಾಡಿಗೆ ಮನಸೋತು ಕುಣಿಯಲು ಪ್ರೇರಣೆಯಾಯಿತು.
ವಿನಾಯಕ ವೃತ್ತದಲ್ಲಿ ಶಾಸಕ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಭೇಟಿ ನೀಡಿ ಉತ್ಸವದಲ್ಲಿನ ಗಣಪನಿಗೆ ಮಾಲಾರ್ಪಣೆ ಮಾಡಿ ಇದೊಂದು ನಾಡಹಬ್ಬದಂತೆ ಶಿವಮೊಗ್ಗ ಜಿಲ್ಲೆಯಲ್ಲಿನ ಗ್ರಾಮೀಣ ಭಾಗದ ಯುವ ಸಮೂಹ ಸಂಘಟಿತರಾಗಿ ವಿಶೇಷವಾಗಿ ಆಚರಣೆ ಮಾಡುವುದು ಪ್ರಶಂಸನೀಯವಾಗಿದೆ ಎಂದು ಹೇಳಿ, ರಿಪ್ಪನ್‌ಪೇಟೆ ಗಣಪತಿಯೆಂದರೆ ನಮಗೂ ಹೋದ ಕಡೆಯಲ್ಲಿ ಹೀಗಂತೆ ಎಂದು ಕೇಳಿದಾಗ ಆಗುವ ಸಂತೋಷವೇ ಬೇರೆ ಎಂದು ಹೇಳಿ ವರಪ್ರದಾಯಕ ವಿಘ್ನೇಶ್ವರ ನಾಡಿನ ಸರ್ವರಿಗೂ ಸುಖ ಶಾಂತಿ ಸಂವೃದ್ಧಿ ಕರುಣಿಸಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಬಿ.ಮಂಜುನಾಥ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಎನ್.ಸತೀಶ್, ಗೌರವಾಧ್ಯಕ್ಷ ವೈ.ಜೆ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ಎನ್.ವರ್ತೇಶ್, ಸತೀಶ್ ಎಂ, ಎಂ.ಸುರೇಶ್‌ಸಿಂಗ್, ಆರ್.ರಾಘವೇಂದ್ರ, ವಾಸುಶೆಟ್ಟಿ, ಕೆ.ಎ.ನಾರಾಯಣ, ಈಶ್ವರ ಮಳಕೊಪ್ಪ, ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ್ ಆಚಾರ್, ಕೆ.ವಿ.ಮುರುಳಿ, ಭೀಮರಾಜ್, ಹೆಚ್.ಎನ್.ಉಮೇಶ್, ಪ್ರಕಾಶ್‌ಶೆಟ್ಟಿ ಡಿ.ಈ.ರವಿಭೂಷಣ, ರಾಮು ಬಳೆಗಾರ,
ಅಟೋ ಲಕ್ಷ್ಮಣ, ಶಿವಗವಟೂರು, ದಾನಪ್ಪ, ಹೆಚ್.ಎನ್.ಚೋಳರಾಜ್, ನಾಗರಾಜ ಕೆದಲುಗುಡ್ಡೆ ಇನ್ನಿತರರು ಪಾಲ್ಗೊಂಡಿದ್ದರು.