ರಿಪ್ಪನ್‌ಪೇಟೆ ; ಸೆ.20 ರಂದು ಪಿಂಚಣಿ ಅದಾಲತ್

0 120


ರಿಪ್ಪನ್‌ಪೇಟೆ: ಕೆರೆಹಳ್ಳಿ ಹೋಬಳಿಯ ರಿಪ್ಪನ್‌ಪೇಟೆ ನಾಡಕಛೇರಿಯಲ್ಲಿ ಉಪತಹಶೀಲ್ದಾರ್ ಹುಚ್ಚರಾಯಪ್ಪನವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 20 ರಂದು ಬುಧವಾರ ಬೆಳಗ್ಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.


ಈ ಪಿಂಚಣಿ ಅದಾಲತ್‌ನಲ್ಲಿ ಪಹಣಿ ತಿದ್ದುಪಡಿ, ಪೌತಿಖಾತೆ ಬದಲಾವಣೆ, ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾವೇತನ, ಅಂಗವಿಕ ವೇತನ, ಸಂಧ್ಯಾ ಸುರಕ್ಷಾ ಮತ್ತು ಮೈತ್ರಿ, ಮನಸ್ವಿನಿ ಅಂತ್ಯಸಂಸ್ಕಾರ, ಆದರ್ಶ ವಿವಾಹ, ಆಮ್ ಆದ್ಮಿ ಭೀಮಾ ರಾಷ್ಟ್ರೀಯ ಕುಟುಂಬ ಪರಿಹಾರ ಯೋಜನೆಗಳ ಅನಿಷ್ಟಾನಗೊಳಿಸುವ ಕುರಿತು ಅರ್ಹ ಫಲಾನುಭವಿಗಳು ಈ ಅದಾನಲ್‌ನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯದ ಸದುಪಯೋಗ ಪಡೆಯುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!