ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು !

0 418

ಶಿವಮೊಗ್ಗ : ರೈಲ್ವೆ (Railway) ಮೇಲ್ಸೇತುವೆ ಕಾಮಗಾರಿ (Work) ವೇಳೆ ಮಣ್ಣು ಕುಸಿದು ಕಾರ್ಮಿಕ (Labor) ಮೃತಪಟ್ಟ (Death) ಘಟನೆ ಶಿವಮೊಗ್ಗ ಗ್ರಾಮಾಂತರ (Shivamogga Rural) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತನನ್ನು ಶಿವಮೊಗ್ಗ (Shivamogga) ತಾಲೂಕಿನ ಮಂಡೇನಕೊಪ್ಪ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಸತೀಶ್ ನಾಯ್ಕ (30) ಎಂದು ಗುರುತಿಸಲಾಗಿದೆ. ಕಾಮಗಾರಿ ವೇಳೆ ಪೈಪ್ ಲೈನ್ ಗೆಂದು 11 ಅಡಿ ಆಳದ ಗುಂಡಿಗೆ ಇಳಿದಿದ್ದ ಕಾರ್ಮಿಕನ ಮೇಲೆ ಮಣ್ಣು ಕುಸಿದಿದೆ. ಇದರ ಪರಿಣಾಮ ಕಾರ್ಮಿಕ ಸತೀಶ್ ಮಣ್ಣಿನ ಅವಶೇಷ ಅಡಿಯಲ್ಲಿ ಸಿಕ್ಕಿದ್ದಾನೆ.

ಕೂಡಲೇ ಮಣ್ಣಿನ ಅವಶೇಷಗಳಡಿಯಿಂದ ಆತನನ್ನು ಹೊರ ತೆಗೆಯಲು ಮುಂದಾದ ಕಾರ್ಮಿಕರು ಜೆಸಿಬಿ ಮೂಲಕ ಕಾರ್ಯಾಚರಣೆ ಪ್ರಾರಂಭಿಸಿದ್ದು, ಈ ವೇಳೆ ಅವಶೇಷಯಡಿಯಲ್ಲಿದ್ದ ಕಾರ್ಮಿಕನ ತಲೆಗೆ ಜೆಸಿಬಿಯಿಂದ ಪೆಟ್ಟುಬಿದ್ದಿದೆ. ಪರಿಣಾಮ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!