ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್

0 4

ಶಿವಮೊಗ್ಗ: ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಅರುಣ್‌ಕುಮಾರ್ ಅವರ ಮೇಲೆ ಸೋಮವಾರ ಲೋಕಾಯುಕ್ತ ದಾಳಿ ನಡೆದು ದೂರುದಾರರಿಂದ 1.5 ಲಕ್ಷರೂ ನಗದು ಪಡೆಯುವಾಗ‌ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.


ಶಿವಮೊಗ್ಗದ ಹನುಮಂತ ಆರ್. ಬನ್ನಿಕೋಡ್ ಅವರು ಮನೆಖಾತೆ ಮಾಡಲು ಅರ್ಜಿ‌ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಶಿರಸ್ತೇದಾರ ಅರುಣ್‌ಕುಮಾರ್ 3ಲಕ್ಷ ರೂ.ಗಳಿಗೆ ಬೇಡಿಕ ಇಟ್ಟಿದ್ದರು ಎನ್ನಲಾಗಿದೆ. ಇದನ್ನು ಅವರು ದಾಖಲೆ ಸಮೇತ ಲೋಕಾಯುಕ್ತ ಎಸ್‌ಪಿಯವರಿಗೆ ನೀಡಿದ್ದರು. ಸೋಮವಾರ ಲೋಕಾಯುಕ್ತ ಎಸ್‌ಪಿ ವಾಸುದೇವ್ ನೇತೃತ್ವದಲ್ಲಿ 1.5ಲಕ್ಷ ರೂ. ನಗದನ್ನು ನೀಡುವಾಗ ದಾಳಿ ಮಾಡಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ತಿಳಿಸಿದ್ದಾರೆ.


ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈಎಸ್‌ಪಿ ಉಮೇಶ್ ನಾಯ್ಕ್, ನಿರೀಕ್ಷಕರುಗಳಾದ ಶಿಲ್ಪ ಹಾಗೂ ರಾಧಾಕೃಷ್ಣ ಮತ್ತು 15 ಮಂದಿ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!