ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ

0 256

ರಿಪ್ಪನ್‌ಪೇಟೆ: ಪುರಾತನ ಕಾಲದ ದೇವಾಲಯಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಧಾರಗಳು ಹಾಗೆಯೇ ಅಲ್ಲಿ ವಾಸಿಸಿದ್ದ ಋಷಿಮುನಿಗಳು ಶಿವಯೋಗ್ಯವರೇಣ್ಯರು ತಮ್ಮ ಪವಾಡ-ಪೂಜೆಗಳಿಂದ ಆಯಾ ಭಾಗದ ಕ್ಷೇತ್ರಗಳನ್ನು ಪಾವನಗೊಳಿಸಿ ಜಗದಿಂದ ಮರೆಯಾಗಿ ಹೋಗಿದ್ದಾರೆ. ಅಂತಹ ಸಾಧಕರ ಪಾದಸ್ಪರ್ಶದ ಸ್ಥಳಗಿಳಿಂದು ಪ್ರಚಾರವಿಲ್ಲದೆ.
ಮೂಲೆಗುಂಪಾಗುತ್ತಾ ಎಷ್ಟೋ ಪ್ರಮುಖ ಇತಿಹಾಸವೂಳ್ಳ ದೇವಸ್ಥಾನಗಳು ಮತ್ತು ಧಾರ್ಮಿಕ ಪವಾಡದ ಹಲವು ಗುಹೆಗಳು ಅಳಿಯುವಂತಾಗಿರುವುದು ಕಾಣಬಹುದಾಗಿದ್ದರೂ ಕೂಡಾ ಅಳಿದುಳಿದಿರುವ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಲೊಂದಾದ ಹೊಸನಗರ ತಾಲ್ಲೂಕಿನ ಕಳಸೆ ಗೌರಿ ಹೊಂಡದ ಗೌರಮ್ಮ ತಾಯಿಗೆ ಹರಿಕೆ ಹೊತ್ತು ಪ್ರಾರ್ಥಿಸಿದರೆ ಮುಂದಿನ ಗೌರಿ ಹಬ್ಬದೊಳಗೆ ಪೂರ್ಣಗೊಳ್ಳುವುದು ಎಂಬ ನಂಬಿಕೆಯಿಂದ ಸುತ್ತಮುತ್ತಲಿನ ನೂರಾರು ಹಳ್ಳಿಗಳ ಮಹಿಳೆಯರು ತಮ್ಮ ಆಶೋತ್ತರಗಳ ಈಡೇರಿಸುವಂತೆ ಪ್ರಾರ್ಥಿಸಿಕೊಂಡ ಒಂದು ವರ್ಷದಲ್ಲಿ ಬೇಡಿದ ವರವನ್ನು ಕರುಣಿಸುವ ಮಹಾತಾಯಿಗೆ ಮುತ್ತೈದೆಯರು ಬಾಗಿನ ನೀಡುವುದು ಇಲ್ಲಿನ ವಿಶೇಷವಾಗಿದೆ.


ಸಂತಾನ ಭಾಗ್ಯ ಮತ್ತು ವಿವಾಹಯೋಗ ಹೀಗೆ ಹತ್ತು ಹಲವು ಮಹಿಳೆಯರ ಕೌಟಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಜಗನ್ಮಾತೆ ಗೌರಮ್ಮ ತಾಯಗೆ ಪ್ರಾರ್ಥಿಸಿ ಬರುವ ಗೌರಿ ಹಬ್ಬದೊಳಗೆ ಮಾಡಿಕೊಂಡ ಹರಕೆ ಪೂರ್ಣವಾಗುವುದು ಹರಕೆಯಂತೆಯೇ ಮಹಿಳೆಯರು ವರಪ್ರದಾಯಿನಿ ಗೌರಿ ಮಾತೆಗೆ ಗೌರಿ ಹಬ್ಬದ ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ವಿಶೇಷ ಪೂಜೆ ನಡೆದು ಗೌರಿ ಹೊಂಡದ ಬಳಿಯಲ್ಲಿಯೇ ಸಿದ್ದಪಡಿಸಿಕೊಂಡ ಬಂದಂತಹ ಬಾಗಿನವನ್ನು ಮುತ್ತೈದೆಯರು ಗೌರಮ್ಮ ತಾಯಿಗೆ ಅರ್ಪಿಸಿ ನಂತರ ಮುತ್ತೈದೆಯರಿಗೆ ಉಡಿ ತುಂಬಿ ಅರಿಶಿಣ ಕುಂಕುಮ ನೀಡಿ ಶುಭಹಾರೈಸುತ್ತಾರೆ.


ವರ್ಷವಿಡಿ ಗೌರಿ ಹೊಂಡದಲ್ಲಿ ನೀರು ಬತ್ತುವುದಿಲ್ಲ ಈ ಹಿಂದೆ ಶಿವಪಾರ್ವತಿಯವರು ಸಂಚಾರ ಮಾಡುವಾಗ ತನ್ನ ಜಟ್ಟೆಯಿಂದ ನೀರು ಹರಿದ ಕಾರಣ ಈ ಹೊಂಡವನ್ನು ಗೌರಿ ಹೊಂಡವೆಂದು ಕೆರೆಯಲಾಗುತ್ತಿದೆ ಎಂದು ಪುರಾಣ ಹೇಳುತ್ತದೆ. ಅದರಂತೆ ಗಣೇಶ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬದೊಂದು ಮಹಿಳೆಯರು ತಾವು ತಾಯಿ ಗೌರಮ್ಮಗೆ ಬಾಗಿನ ನೀಡುವುದು ಸಂಪ್ರದಾಯವಾಗಿದ್ದು ಇಲ್ಲಿನ ಇತಿಹಾಸದಂತೆ ಕಳಸೆ ಗ್ರಾಮದಲ್ಲಿನ ಗೌರಿಹೊಂಡದ ಗೌರಮ್ಮಳಿಗೆ ತಮ್ಮ ಆಶೋತ್ತರಗಳ ಪರಿಹರಿಸುವಂತೆ ಬೇಡಿಕೊಂಡ ಮುತ್ತೈದೆಯರು ಹಬ್ಬದ ದಿನ ಬಂದು ತಮ್ಮ ಸಂಬಂಧಿಕರ ಮತ್ತು ಅಕ್ಕಪಕ್ಕದವರ ಹೀಗೆ ಹಲವರು ಬಂದು ಗೌರಿಹೊಂಡದಲ್ಲಿನ ಮಹಾತಾಯಿ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.


ಮುಡುಬ, ಬೆನವಳ್ಳಿ, ದೊಡ್ಡಿನಕೊಪ್ಪ, ಕಳಸೆ, ಬೆಳಂದೂರು, ಗವಟೂರು, ಹುಂಚ, ಅಚ್ಚೆಕೊಪ್ಪ, ಕಗ್ಗಲಿ, ಹಾರೋಹಿತ್ತಲು, ಶಿವಮೊಗ್ಗ, ಹಾರನಹಳ್ಳಿ, ತಳಲೆ ಹೀಗೆ ಸುತ್ತಮುತ್ತಲಿನ ನೂರಾರು ಗ್ರಾಮಗಳ ಮಹಿಳೆಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಮಾತೆ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.

Leave A Reply

Your email address will not be published.

error: Content is protected !!