ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ವಂಚನೆ ; ಅತಂತ್ರ ಸ್ಥಿತಿಯಲ್ಲಿ ಫಲಾನುಭವಿಗಳು

0 652

ರಿಪ್ಪನ್‌ಪೇಟೆ: ಈ ಹಿಂದಿನ ರಾಜ್ಯ ಸರ್ಕಾರ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ ಸರ್ಕಾರದಿಂದ ಬಸವ ವಸತಿ ಯೋಜನೆಯಡಿ 56 ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಖಾಲಿ ಜಾಗವನ್ನು ಜಿ.ಪಿ.ಎಸ್ ಮೂಲಕ ಎಲ್ಲ ಪ್ರಕ್ರಿಯೆಯನ್ನು ನಡೆಸಲಾಗಿ ಈವರೆಗೂ ಸರ್ಕಾರದ ವಸತಿ ನಿಗಮದಿಂದ ಅನುದಾನ ಬಿಡುಗಡೆಯಾಗದೇ ಇರುವ ಕಾರಣ ಫಲಾನುಭವಿಗಳು ವಂಚಿತರನ್ನಾಗಿ ಮಾಡುವ ಮೂಲಕ ಆತಂತ್ರಗೊಳಿಸಿದ್ದಾರೆಂದು ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪಿಸಿದರು.

ಗ್ರಾಮ ಪಂಚಾಯ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ಹರತಾಳು ಹಾಲಪ್ಪನವರ ವಿಶೇಷ ಆಸಕ್ತಿ ವಹಿಸಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯವರ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ವಸತಿ ನಿಗಮದ ಮೂಲಕ 56 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ವಿಶೇಷ ಅನುದಾನವನ್ನು ಬಿಡುಗೊಳಿಸಲಾಗಿದ್ದರೂ ಕೂಡಾ ಈ ವರೆಗೂ ಹಣ ಬಿಡುಗಡೆಮಾಡದೇ ಫಲಾನುಭವಿಗಳನ್ನು ಅತಂತ್ರ ಸ್ಥಿತಿಗೆ ನೂಕಿದ್ದಾರೆಂದು ಆರೋಪಿಸಿ ರಾಜ್ಯದ ಗ್ರಾಮೀಣಾಭಿವೃದ್ದಿ ಪಂಚಾಯ್ತಿರಾಜ್ ಇಲಾಖೆಯ ಸಚಿವರಿಗೂ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಪತ್ರ ಬರೆಯುವ ಮೂಲಕ ತಕ್ಷಣ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Leave A Reply

Your email address will not be published.

error: Content is protected !!