ವಾಸವಿ ಪಬ್ಲಿಕ್‌ ಶಾಲೆಯಿಂದ ಪರಿಸರ ಸ್ನೇಹಿ ಗಣಪತಿಗಳ ವಿತರಣೆ

0 0

ಶಿವಮೊಗ್ಗ: ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಪರಿಸರ ಸಂರಕ್ಷಣೆಗೋಸ್ಕರ ಪರಿಸರ ಸ್ನೇಹಿ ಗಣಪತಿಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷವೂ ಸಹ ನೂರು ಪರಿಸರಸ್ನೇಹಿ ಗಣಪತಿಗಳನ್ನು ವಿತರಿಸಲಾಗುವುದು ಎಂದು ಶಾಲೆಯ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲೆಯಲ್ಲಿ ಪರಿಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಪ್ರತಿವರ್ಷ ಹಬ್ಬ ಆಚರಿಸಲಾಗುತ್ತದೆ ಎಂದರು.

ನದಿಯ ನೀರು ಹಾಳಾಗದಂತೆ ಹಾಗೂ ಜಲಚರ ಜೀವಿಗಳು ನಾಶವಾಗುವುದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಆವರಣದಲ್ಲಿ ಪ್ರತಿವರ್ಷ ಕೃತಕ ಕೆರೆ ನಿರ್ಮಿಸಿ ಹಬ್ಬದ ದಿನ ಸುಮಾರು 200 ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ಶಾಲೆಯ ಸುತ್ತಮುತ್ತ ಇರುವ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿಯ ವಿಸರ್ಜನೆಗೆ ಈಗಾಗಲೇ ಜಾಗೃತಿ ಮೂಡಿಸಿದ್ದು, ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವಂತೆ ಶಾಲೆಯ ರೋಟರಿ ಇಂರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಮನೆ ಮನೆಗೆ ತೆರಳಿ ಮನವಿ ಮಾಡುತ್ತಿದ್ದಾರೆ ಎಂದರು.

ಸುಮಾರು 100ಕ್ಕೂ ಹೆಚ್ಚು ಪರಿಸರಸ್ನೇಹಿ ಗಣಪತಿ ಮೂರ್ತಿಯನ್ನು ವಿತರಿಸಲಾಗುತ್ತಿದ್ದು, 1 ಮೂರ್ತಿಗೆ 150 ರೂ. ಬೆಲೆ ನಿಗದಿ ಮಾಡಿದ್ದು, ಸೆ.12ರಿಂದ ವಿತರಿಸಲಾಗುವುದು. ಹಬ್ಬದ ಮೊದಲ ದಿನ ರಾತ್ರಿ 8-30ರಿಂದ 11-30ರವರೆಗೆ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 99165 14066ರಲ್ಲಿ ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಅಧ್ಯಕ್ಷ ಬಿ.ಎಲ್. ಶ್ಯಾಮಸುಂದರ್, ಎಸ್.ನಾಗರಾಜ್, ಸೌಮ್ಯ, ರೋಟರಿ ಇಂರ‍್ಯಾಕ್ಟ್ ಕ್ಲಬ್‌ನ ಸದಸ್ಯರಾದ ತನುಶ್ರೀ, ಚೇತನ್, ಚಿನಿಶಾ ಉಪಸ್ಥಿತರಿದ್ದರು.

ಶಿವಮೊಗ್ಗ: ಜೆಸಿಐ ಶಿವಮೊಗ್ಗದ ಸಹ ಸಂಚಾಲಕಿ ದಿವ್ಯ ಪ್ರವೀಣ್ ಅವರಿಗೆ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯು `ಕನಕಶ್ರೀ ಚೇತನ ಪತಂಜಲಿ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ಹೊಸಮನೆ ಮೂರನೇ ತಿರುವಿನಲ್ಲಿರುವ ಪತಂಜಲಿ ಯೋಗ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ದಿವ್ಯ ಪ್ರವೀಣ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಜೆ. ನಾಗರಾಜ್, ಪ್ರಮುಖರಾದ ಎ.ಹೆಚ್. ಶ್ಯಾಮಲಾ, ಜಿ.ಇ. ಶಿವಾನಂದಪ್ಪ, ಪರಿಸರ ಸಿ. ರಮೇಶ್, ಟಿ.ಎನ್. ಶಶಿಧರ್ ಸೇರಿದಂತೆ ಹಲವರಿದ್ದರು.

ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ

Leave A Reply

Your email address will not be published.

error: Content is protected !!