ವಾಹನ ಸಮೇತ ನಾಟ ವಶಕ್ಕೆ ; ಆರೋಪಿ ಬಂಧನ

0 1,181

ಶಿವಮೊಗ್ಗ : ಇಂದು ಬೆಳಗಿನಜಾವ ಶಂಕರ ವಲಯದ ವಲಯ ಅರಣ್ಯಾಧಿಕಾರಿ ಸುಧಾಕರ.ಬಿ ರವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಶಿವಮೊಗ್ಗ ನಗರದ ಹೊರವಲಯ ಹೊಳೆಹೊನ್ನೂರು ರಸ್ತೆಯಲ್ಲಿ ಕಳ್ಳ ಸಾಗಾಣಿಕೆಯಾಗುತ್ತಿದ್ದ ಬೀಟೆ ಮತ್ತು ಅಪರೂಪದ ಕರಿ ಮರದ ಜಾತಿಯ (32=0.601ಘ.ಮೀ) ತುಂಡುಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಬೊಲೆರೋ ವಾಹನ (TN-49-BM-3542) ಸಮೇತ ಆರೋಪಿ ಶಿವಮೊಗ್ಗದ ಅಲೆಮಾನ್‌ಕೇರಿ ನಿವಾಸಿ ಸೈಯದ್ ಅಜೀಜ್‌ಊ‌ರ್ ರಹಮಾನ್.ಎಮ್.ಬಿ ಬಿನ್ ಬಷೀರ್ ಅಹ್ಮದ್.ಎಮ್. ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯು ವಿವಿಧ ಅರಣ್ಯ ವಲಯದ ಪ್ರಕರಣದಲ್ಲಿ ಹಾಗೂ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಪ್ರಸ್ತುತ ತನಿಖೆ ಆರಂಭವಾಗಿದ್ದು, ಆರೋಪಿಯ ಸಹಚರರ ಮೇಲೆ ನಿಗಾವಹಿಸಲಾಗಿದೆ ಎಂದು ಶಂಕರ ವಲಯ ಅರಣ್ಯಾಧಿಕಾರಿ ಪತ್ರಿಕಾ ಪ್ರಕಟಣೆ ಮ‌ೂಲಕ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಶಂಕರ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ನರೇಂದ್ರಕುಮಾರ್.ಬಿ.ಜೆ., ಉಮೇಶ್ ನಾಯ್ಕ ಎಸ್ ಮತ್ತು ಗಸ್ತು ಅರಣ್ಯಪಾಲಕರಾದ ಅವಿನಾಶ್,ಜಿ, ಚಲ್ವಮಣಿ.ಎಂ, ಮಲ್ಲಪ್ಪ ಹರಿಜನ ಮತ್ತು ಅರಣ್ಯ ವೀಕ್ಷಕರಾದ ಬಿ.ಪಿ.ಮಂಜುನಾಥ ಹಾಗೂ ವಾಹನಚಾಲಕ ಲಿಂಗನಾಯ್ಕ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!