ವಿಜ್ಞಾನ ಸದಾ ಹೊಸತನ್ನು ಅನ್ವೇಷೀಸುತ್ತದೆ ; ಇಸ್ರೋ ವಿಜ್ಞಾನಿ ಸುಬ್ರಹ್ಮಣ್ಯ ಉಡುಪ

0 444


ಹೊಸನಗರ: ವಿಜ್ಞಾನ ಸದಾ ಹೊಸತನ್ನು ಅನ್ವೇಷೀಸುತ್ತದೆ ಎಂದು ಸಂಸ್ಥೆಯ ವಿಜ್ಞಾನಿ ಸುಬ್ರಹ್ಮಣ್ಯ ಉಡುಪರವರು ಹೇಳಿದರು.


ಪಟ್ಟಣದ ಖಾಸಗಿ ಶಾಲೆ ಗುರೂಜಿ ಇಂಟರ್ ನ್ಯಾಶನಲ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿ ವಿಜ್ಞಾನಿಗಳ ಸಮಾಗಮ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಇವತ್ತು ಇರುವ ಸ್ಥಿತಿ ನಾಳೆಗೆ ಮತ್ತೇನೋ ಆಗಿರಬಹುದು ಇಂದಿನ ಹೇಳಿಕೆ ನಾಳೆಗೆ ಬದಲಾಗಬಹುದು ಹಾಗಾಗಿ ವಿಜ್ಞಾನ ಸತ್ಯದ ಹುಡುಕಾಟದಲ್ಲಿ ತೊಡಗಿಕೊಂಡು ವಾಸ್ತವದ ವರದಿಯನ್ನು ಸಮಾಜಕ್ಕೆ ಕೊಡಲೇಬೇಕಾಗುತ್ತದೆ ಹಾಗೆ ಚಂದ್ರಯಾನದ ಮೂಲಕ ನಾವು ವಿಜ್ಞಾನಿಗಳು ದಕ್ಷಿಣ ದ್ರುವದಲ್ಲಿ ವಾಸ್ತವತೆಯ ತಿಳುವಿಗಾಗಿ ವಾಸಯೋಗ್ಯ ಪರಿಸರ ಹವಾಮಾನಗಳ ಅಧ್ಯಯನಕ್ಕಾಗಿ ಅವಿರತ ಪರಿಸ್ರಮಿಸುತ್ತಿದ್ದೇವೆ. ಜೀವಿಗಳಿರಬಹುದಾದ ಕುರುಹು ನಾಶವಾಗಿರಬಹುದಾದ ಕುರುಹು ಕುರಿತಂತೆ ಅಧ್ಯಯನ ಶೀಲರಾಗಿದ್ದೇವೆ ಎಂದು ಹೇಳಿದರು.


ಈ ಶಾಲೆಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವುದು ಪ್ರತಿ ವಾರ ಓಪನ್ ಮೈಂಡ್ ಕಾರ್ಯಕ್ರಮದ ಮೂಲಕ ಮಕ್ಕಳ ಕುತೂಹಲ ತಣಿಸುವ ಪ್ರಯತ್ನವನ್ನು ಅಭಿನಂದಿಸಿದರು
ಈ ಗುರೂಜಿ ಶಾಲೆಯಲ್ಲಿ ಚಂದ್ರಯಾನ ಯಶಸ್ಸಿನ ಸವಿನೆನಪಿಗೆ ಸನ್ಮಾನ ಮಾಡಲಾಯಿತ್ತು ವಿಜ್ಞಾನದ ಕುರಿತಂತೆ ತಮಗಿದ್ದ ಅನುಮಾನಗಳನ್ನು ಪ್ರಶ್ನೆ ಕೇಳಿ ಉತ್ತರ ಕೊಂಡುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಪಟ್ಟರು ಮಕ್ಕಳ ಮುಗ್ದ ಪ್ರಶ್ನೆಗಳಿಗೆ ನಗುಮೊಗದ ಉತ್ತರ ನೀಡುತ್ತಿದ್ದ ಅವರ ಮನೋಲಹರಿ ಸಭಿಕರಲ್ಲಿ ಅಭಿಮಾನ ಮೂಡಿಸಿತು.


ಸಭೆಯಲ್ಲಿ ಕೊಡಚಾದ್ರಿ ಕಾಲೇಜು ಪ್ರಿನ್ಸಿಪಾಲ್ ಉಮೇಶ್, ಪ್ರಾಧ್ಯಾಪಕ ಶ್ರೀಪತಿ ಹಳಗುಂದ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೆಚ್.ಆರ್, ಸಂಸ್ಥೆಯ ಅಧ್ಯಕ್ಷ ಸುದೇಶ್ ಕಾಮತ್, ಸದಾಶಿವ ಶ್ರೇಷ್ಠಿ, ನಾಗೇಶ್, ಶಾಂತಮೂರ್ತಿ, ಶಿವಕುಮಾರ್, ಸುಷ್ಮಾ, ಚಂದ್ರಕಲಾ, ಉಷಾ, ಸುಮಲತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!