ವಿಧಾನಸಭಾ ಚುನಾವಣೆ – 2023 | ಶಿವಮೊಗ್ಗ ಜಿಲ್ಲೆಯಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು ಎಷ್ಟು? ಯಾರ‍್ಯಾರು ಉಳಿದಿದ್ದಾರೆ ಗೊತ್ತಾ?


ಶಿವಮೊಗ್ಗ : ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು 74 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ


ಶಿವಮೊಗ್ಗ ಗ್ರಾಮಾಂತರ-111 ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್ ಕಣದಲ್ಲಿ ಉಳಿದಿದ್ದಾರೆ.

ಭದ್ರಾವತಿ ಕ್ಷೇತ್ರ


ಭದ್ರಾವತಿ-112 ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.

ಶಿವಮೊಗ್ಗ ಕ್ಷೇತ್ರ


ಶಿವಮೊಗ್ಗ-113 ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಯ ಎಸ್.ಎನ್.ಚನ್ನಬಸಪ್ಪ, ಐಎನ್‍ಸಿ ಹೆಚ್.ಸಿ.ಯೋಗೇಶ್, ಎಎಪಿ ನೇತ್ರಾವತಿ.ಟಿ, ಜೆಡಿಎಸ್ ಆಯನೂರ್ ಮಂಜುನಾಥ, ಉತ್ತಮ ಪ್ರಜಾಕೀಯ ಪಾರ್ಟಿ ಯ ವೆಂಕಟೇಶ್ ಆರ್, ಕೆಆರ್‍ಎಸ್ ನ ರಾಜೇಂದ್ರ ಡಿ, ಪಕ್ಷೇತರ ರಿಯಾಜ್ ಅಹಮದ್, ಮೊಹಮ್ಮದ್ ಯೂಸುಫ್ ಖಾನ್, ಅಜಯ್‍ಕುಮಾರ್ ಬಿ.ಎಸ್, ಅಕ್ಕಮಹಾದೇವಿ.ಹೆಚ್.ಎಂ, ಶೇಖರನಾಯ್ಕ್, ವಿ.ಹನುಮಶೆಟ್ಟಿ, ಅನಿಲ್.ಎಂಆರ್, ಹೆಚ್.ಎಸ್.ಗಣೇಶ್, ರವಿಕುಮಾರ್.ಎನ್ ಕಣದಲ್ಲಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರ


ತೀರ್ಥಹಳ್ಳಿ-114 ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್‍ಸಿ ಕಿಮ್ಮನೆ ರತ್ನಾಕರ, ಕೆಆರ್‍ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಹೆಗ್ಗಡೆ ಕಣದಲ್ಲಿದ್ದಾರೆ.
ಶಿಕಾರಿಪುರ-115 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಪಿಐ ಪಕ್ಷದ ಯಲ್ಲಪ್ಪ, ಕೆಆರ್‍ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ ಇಮ್ತಿಯಾಜ್ ಅತ್ತರ್, ಜಿ.ಬಿ.ಮಾಲತೇಶ್, ಅನಿಲ್.ಎಂ.ಆರ್, ಮೊಹಮ್ಮದ್ ಸಾದಿಕ್, ನಾಗನಗೌಡ ಎಸ್.ಪಿ, ಗಣೇಶ ಆರ್. ಕಣದಲ್ಲಿದ್ದಾರೆ.ಸ

ಸೊರಬ ಕ್ಷೇತ್ರ


ಸೊರಬ-116 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಬಿ.ಚಂದ್ರಪ್ಪಗೌಡ, ಸಮಾಜವಾದಿ ಪಾರ್ಟಿ ಪರಶುರಾಮ ವಿ.ಜಿ, ಎಎಪಿ ಚಂದ್ರಶೇಖರ ಕೆ ವೈ, ಉತ್ತಮ ಪ್ರಜಾಕೀಯ ಪಾರ್ಟಿ ಲಕ್ಷ್ಮೀಕಾಂತ ಸಿ.ಎಸ್, ಐಎನ್‍ಸಿ ಮಧು ಬಂಗಾರಪ್ಪ, ಬಿಜೆಪಿ ಎಸ್ ಕುಮಾರ್ ಬಂಗಾರಪ್ಪ, ಕೆಆರ್‍ಎಸ್ ಟಿ.ಮಂಜುನಾಥ, ಪಕ್ಷೇತರ ಶಿವಯೋಗಿ ಎಸ್ ಎಸ್, ಗುಡ್ಡಪ್ಪ, ಜೆ.ಎಸ್.ಚಿದಾನಂದ ಗೌಡ ಕಣದಲ್ಲಿದ್ದಾರೆ.

ಸಾಗರ ಕ್ಷೇತ್ರ


ಸಾಗರ-117 ಕ್ಷೇತ್ರದಲ್ಲಿ ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಸೈಯದ್ ಜಾಕಿರ್, ಕೆಆರ್‍ಎಸ್ ಕಿರಣ್.ಬಿ.ಇ, ಬಿಜೆಪಿ ಹೆಚ್.ಹಾಲಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ ಸೋಮರಾಜ ಎನ್, ಐಎನ್‍ಸಿ ಗೋಪಾಲಕೃಷ್ಣ ಬೇಳೂರು, ಎಎಪಿ ಕೆ.ದಿವಾಕರ, ಪಕ್ಷೇತರ ಶಿವಕುಮಾರ ಕೆ.ವಿ, ಹರಟೆ ಗಾಮಪ್ಪ, ಟಿ.ಎನ್.ಶ್ರೀನಿವಾಸ ಕಣದಲ್ಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!