ವೈದ್ಯಾಧಿಕಾರಿ, ಸಿಬ್ಬಂದಿಗಳಿಲ್ಲದೆ ಸೊರಗುತ್ತಿದೆ ರಿಪ್ಪನ್‌ಪೇಟೆ ಸರ್ಕಾರಿ ಪಶು ಆಸ್ಪತ್ರೆ

0 191

ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಲ್ಲದೆ ಇರುವುದು ಬಾಗಿಲು ತೆಗೆಯಲು ಡಿ.ಗ್ರೂಪ್ ಸಿಬ್ಬಂದಿಗಳು ಇಲ್ಲ. ಇನ್ನೂ ‘ಓನ್ ಮ್ಯಾನ್ ಶೋ’ ನಲ್ಲಿ ಪಶು ಪರಿವೀಕ್ಷಕ ಏಕಾಕಾಲದಲ್ಲಿ ಎಲ್ಲಿಗೆ ಹೋಗಬೇಕು ತಾವೇ ಊಹಿಸಿಕೊಳ್ಳಿ.

ಕಳೆದ ಒಂದು ವರ್ಷದಿಂದ ಇಲ್ಲಿನ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು ಇದ್ದ ವೈದ್ಯರನ್ನು ಬೇರೆ ಕಡೆ ವರ್ಗಾಯಿಸಿ ಇಲ್ಲಿನ ಆಸ್ಪತ್ರೆಗೆ ವೈದ್ಯರೇ ಇಲ್ಲದಂತೆ ಮಾಡಿದ್ದಾರೆ ಇದಕ್ಕೆ ನಾವು ಯಾರನ್ನು ಕೇಳಬೇಕು ಎಲ್ಲಿಗೆ ಹೋಗಬೇಕು ಹೀಗಾದರೆ ಸಂಬಂಧಿಸಿದ ಸರ್ಕಾರ ಮತ್ತು ಪಶು ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.

ಈಗಾಗಲೇ ಮಲೆನಾಡಿನ ವ್ಯಾಪ್ತಿಯಲ್ಲಿ ಗಂಟಲು ಬೇನೆ, ಕಾಲುಬಾಯಿ, ಚರ್ಮ ಗಂಟು ಹೀಗೆ ರೋಗದಿಂದ ಸಾಕಷ್ಟು ಜಾನುವಾರುಗಳು ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೇ ರೋಗ ಉಲ್ಬಣಗೊಂಡು ಮಲೆನಾಡು ಗಿಡ್ಡ ತಳಿಗಳು ಸೇರಿದಂತೆ ಇನ್ನಿತರ ಜಾನುವಾರುಗಳು ಸಾವನ್ನಪ್ಪಿದ್ದು ಇದರಿಂದ ರೈತಾಪಿ ವರ್ಗ ಹೈನುಗಾರಿಕೆ ಮಾಡುವುದೇ ಹೇಗೆ ಎಂಬ ಚಿಂತೆಯಲ್ಲಿದ್ದು ಇದರೊಂದಿಗೆ ಹೊಸನಗರ ತಾಲ್ಲೂಕಿನಲ್ಲಿ ಪಶು ಇಲಾಖೆಯಲ್ಲಿ 80 ಜನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇರಬೇಕಾಗಿದ್ದು ಈಗ ಕೇವಲ 2 ಜನ ವೈದ್ಯಾಧಿಕಾರಿಗಳು ಹಾಗೂ ಹಿರಿಯ ಪರಿವೀಕ್ಷಕರು 5 ಜನ ಕಿರಿಯ ಪರಿವೀಕ್ಷಕರು 4 ಹಾಗೂ ಡಿ.ಗ್ರೂಪ್ 4 ಜನ ಬಿಟ್ಟರೆ ಉಳಿದಂತೆ ಎಲ್ಲ ಖಾಲಿ ಖಾಲಿ.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ 10 ಸಾವಿರ ಜಾನುವಾರುಗಳಿದ್ದರೆ ತಾಲ್ಲೂಕಿನಲ್ಲಿ 1.30 ಲಕ್ಷ ಜಾನುವಾರುಗಳಿವೆ ಎಂದು ಪಶು ಇಲಾಖೆಯ ಮಾಹಿತಿ ಹೇಳಲಾಗುತ್ತಿದ್ದು ಮಲೆನಾಡಿನಲ್ಲಿ ಜಾನುವಾರುಗಳ ಸಂಖ್ಯೆಗನುಗುಣವಾಗಿ ವೈದ್ಯಾಧಿಕಾರಿಗಳಾಗಲಿ ಮತ್ತು ಸಿಬ್ಬಂದಿಗಳಾಗಲಿ ಇಲ್ಲದೇ ಇರುವುದು ನಮ್ಮ ತಾಲ್ಲೂಕಿಗೆ ಶಾಪವಾದಂತಾಗಿದೆ.

ಒಟ್ಟಾರೆಯಾಗಿ ಸುಸಜ್ಜಿತ ಆಸ್ಪತ್ರೆ ಕಟ್ಟಡಗಳು ಮತ್ತು ಕಛೇರಿಗಳು ಇದ್ದರೂ ಕೂಡಾ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಮಲೆನಾಡಿನ ಹೊಸನಗರ ತಾಲ್ಲೂಕಿನಲ್ಲಿನ ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಲ್ಲದೇ ಪಾಳುಬಿದ್ದಿವೆ.

ಇನ್ನಾದರೂ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಲೆನಾಡಿನ ಗ್ರಾಮೀಣ ಪ್ರದೇಶದ ಹೈನುಗಾರಿಕೆಗೆ ಉತ್ತೇಜಿಸಲು ಪಶು ಆಸ್ಪತ್ರೆಗಳಿಗೆ ಸಮರ್ಪಕ ಸಿಬ್ಬಂದಿಗಳನ್ನು ನೇಮಿಸುವತ್ತಾ ಗಮನಹರಿಸುವರೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!