ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಶ್ರೀಗಳಿಂದ ಬಿಡುಗಡೆ

0 262

ರಿಪ್ಪನ್‌ಪೇಟೆ: ಡಿಸೆಂಬರ್ 12 ರಂದು ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನಮಠದಲ್ಲಿ ಆಯೋಜಿಸಲಾದ ಶರಣ ಸಾಹಿತ್ಯ ಸಮೇಳನ ಮತ್ತು 573ನೇ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಭಾವೈಕ್ಯ ಸಮ್ಮೇಳನ ಹಾಗೂ ಕಂಚಿನ ರಥೋತ್ಸವ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ 2023 ನೇ ಸಾಲಿನ ಕಾರ್ತಿಕ ದೀಪೋತ್ಸವ ಸಮಿತಿ ಆಧ್ಯಕ್ಷ ಹರತಾಳು ನಾಗರಾಜಗೌಡ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪಗೌಡ ಮತ್ತು ಖಜಾಂಚಿ ಜೆ.ಎಸ್.ಚಂದ್ರಪ್ಪ, ಜಯಶೀಲಗೌಡ, ಆಚಾಪುರ ಶಾಂತಕುಮಾರ್, ಹೆಚ್.ಎಂ.ವರ್ತೇಶ್, ಜಿ.ಡಿ.ಮಲ್ಲಿಕಾರ್ಜುನ, ದೀಪೋತ್ಸವ ಸಮಿತಿಯವರು ಹಾಗೂ ಇನ್ನಿತರ ಭಕ್ತವೃಂದ ಹಾಜರಿದ್ದರು.

Leave A Reply

Your email address will not be published.

error: Content is protected !!