ಶಾಲೆಯಲ್ಲಿ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಆರೋಪ ; ಸರ್ಕಾರದ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಿಡಿ

0 543

ಶಿವಮೊಗ್ಗ : ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ತವರು ಜಿಲ್ಲೆಯ ಶಾಲೆಗಳಲ್ಲಿ (Schools) ಮೊಟ್ಟೆ (Egg) ಕದನ ಆರಂಭವಾಗಿದೆ. ಕೆಲ ಶಾಲಾ (School) ಮಕ್ಕಳಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸುತ್ತಿರುವ ಆರೋಪ ಕೇಳಿ ಬಂದಿದೆ. ಸರ್ಕಾರದ ವಿರುದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಿಡಿ ಕಾರುತ್ತಿದೆ.

ಈ ರೀತಿ ಮಾಡುವುದು ಸರಿಯಲ್ಲಾ ಎಂಬುದಾಗಿ ಹಲವಾರು ಜನ ಸೋಶಿಯಲ್ ಮೀಡಿಯಾಗಳಲ್ಲೂ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ.

ಸಚಿವ ಮಧುಬಂಗಾರಪ್ಪಗೆ ಪತ್ರ ಬರೆದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿನಿಗೆ ಬಲವಂತವಾಗಿ ಕೋಳಿ ಮೊಟ್ಟೆ ತಿನ್ನಿಸುತ್ತಿದ್ದಾರೆ ಎಂಬುದು ತಿಳಿದ ಪಾಲಕರೂ ಬೇಸರಗೊಂಡಿದ್ದಾರೆ. ಆಹಾರ ಪದ್ದತಿ ವೈಯುಕ್ತಿಕ ವಿಚಾರ ಇದನ್ನು ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದ್ದಾರೆ.

ವ್ಯಕ್ತಿಗಳ ಧಾರ್ಮಿಕ ಆಚರಣೆ, ಆಹಾರ ಪದ್ದತಿಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಕಟ್ಟಾ ಸಸ್ಯಹಾರಿ ವಿದ್ಯಾರ್ಥಿನಿಗೆ ಇಷ್ಟವಿಲ್ಲದ ಆಹಾರ ತಿನ್ನಲು ಬಲವಂತಿಸುವುದು ತರವಲ್ಲ. ಅದರಲ್ಲೂ ಶಾಲೆಗಳಲ್ಲಿ ಎಳೆವಯಸ್ಸಿನ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಸಂಬಂಧ ಶಿವಮೊಗ್ಗ ಡಿಡಿಪಿಐಗೆ ದೂರು ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ಶಿಕ್ಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಪತ್ರದ ಮೂಲಕ ಶಿಸ್ತುಕ್ರಮಕ್ಕೆ ಒತ್ತಾಯಿಸಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್​ ಹಾರನಹಳ್ಳಿ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕೂಡಲೇ ಘಟನೆಗೆ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಗೂ ಸಹ ಅವರ ಆಹಾರ ಪದ್ಧತಿಯ ವಿರುದ್ಧವಾಗಿ ಏನನ್ನೂ ತಿನ್ನಿಸಬಾರದು ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡಿರುವುದು ತಪ್ಪು ಎಂದು ಖಂಡಿಸಿದ್ದಾರೆ.

ಈ ವಿಷಯವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತರುವ ಸಲುವಾಗಿ ಪತ್ರ ಬರೆಯಲಾಗಿದೆ.

Leave A Reply

Your email address will not be published.

error: Content is protected !!