ಶಾಸಕ ಬೇಳೂರು ಗೋಪಾಲಕೃಷ್ಣಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಯಾರೇಂದು ಗೊತ್ತಿಲ್ವಂತೆ !

0 478

ಶಿವಮೊಗ್ಗ : ನೇರವಾಗಿ, ಅತ್ಯಂತ ಕಟುವಾಗಿ ಮಾತನಾಡುವ ಸಾಗರ ಶಾಸಕ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಇಂದು ಸಾರಸಗಟಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ, ಸಂಸದ ರಾಘವೇಂದ್ರ, ಅವರದೇ ಪಕ್ಷದ ಸಚಿವ ಮಧು ಬಂಗಾರಪ್ಪ ಸೇರಿದಂತೆ ಬಹಳಷ್ಟು ಪ್ರಮುಖರ ವಿರುದ್ಧ ನೇರ ಆರೋಪ ನೀಡುವ ಮೂಲಕ ಹೊಸ ಬಗೆಯ ಬಾಂಬ್ ಸಿಡಿಸಿದ್ದಾರೆ.

ಶಿವಮೊಗ್ಗ ಪ್ರವಾಸಿ ಮಂದಿರವಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಷಯವಾರು ಎಲ್ಲರನ್ನೂ ಅವರವರ ವಿಷಯಕ್ಕೆ ಟೀಕಿಸುತ್ತ ಬಹಳಷ್ಟು ಕಡೆ ಏಕವಚನದಲ್ಲೂ ಪದ ಬಳಸಿದರು.

ಅವರ ಮಾತಿನ ವಿವರಗಳು ಇಂತಿವೆ. ಡಿಸಿಸಿ ಬ್ಯಾಂಕಿನ ಹಗರಣದಲ್ಲಿ ಸಂಸದ ರಾಘವೇಂದ್ರ ಪಾತ್ರ ಇದೆ ಎಂದು ಇಡೀ ಹಿಂದಿನ ಅಧ್ಯಕ್ಷ ಚನ್ನ ವೀರಪ್ಪ ಮೇಲಿನ ಆರೋಪಕ್ಕೆ ಹೊಸ ಟ್ವಿಸ್ಟ್ ನೀಡಿದರು.
ಬಿಜೆಪಿಯ ನಾಯಕರು ಬರ ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯದ ವಿಪಕ್ಷ ಮುಖಂಡರು ಬರ ವೀಕ್ಷಣೆಗೆ ಹೊರಟ್ಟಿದ್ದಾರೆ. ಆದರೆ ರಾಜಕೀಯ ಮಾಡುವುದನ್ನು ಖಂಡಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಪರಿಹಾರ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ನಾಯಕನೇ ಇಲ್ಲ. ನಿಮ್ಮ ಕಾಲದಲ್ಲಿ ನೆರೆ ಬಂತು ಏನಾದರೂ ಪರಿಹಾರ ಕೊಟ್ರಾ? ಕೇವಲ ಸಮೀಕ್ಷೆ ಮಾಡಿಕೊಂಡು ಹೋದ್ರಿ ನಿಮ್ಮ ಪ್ರಧಾನಿ, ನಿಮ್ಮ ಸರಕಾರ ಏನಾದರೂ ಪರಿಹಾರ ಕೊಟ್ರಾ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಬರ ಅಧ್ಯಯನ ಮಾಡ್ತೀವಿ ಅಂತೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು. ಬರದ ಬಗ್ಗೆ ಸಮೀಕ್ಷೆ ನಡೆಸಬೇಕು. ಬರ ಪರಿಹಾರ ಸಮರ್ಪಕವಾಗಿ ಕೊಡಲು ಶ್ರಮಿಸಬೇಕು ಎಂದು ನಮ್ಮ ಸರಕಾರವನ್ನು ನಾನು ಒತ್ತಾಯ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಇವತ್ತು ರೆಸಾರ್ಟ್ ನಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡಿದ್ದಾರೆ. ನೀವು ಕೂಡಿ ಹಾಕಿಕೊಂಡರೂ ಅವರು ಯಾರೂ ನಿಮ್ಮಲ್ಲಿ ಇರಲ್ಲ. ಬಿಜೆಪಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಏನಾಗೊಲ್ಲ ಎಂದರು.

ಈಶ್ವರಪ್ಪ ಅವರಿಗೆ ನೆಲೆ ಇಲ್ಲ, ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಯಾವ ಯೋಗ್ಯತೆ ಇದೆ. ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್ ಕಟ್ಟಿಕೊಂಡು ಹೋದ್ರೆ ರಾಜ್ಯದಲ್ಲಿ ಬಿಜೆಪಿ 65 ಸೀಟ್ ಬಂದಿದೆ. ಮುಂದೆ 22 ಬರುತ್ತದೆ. ಯಡಿಯೂರಪ್ಪ ಅವರಿಗೆ ಬದ್ದತೆ ಇದ್ದರೆ ಕೇಂದ್ರದಿಂದ ಪರಿಹಾರ ಕೊಡಿಸಿ. ಕೇಂದ್ರ ಸರಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸಿ ಎಂದರು.

ಪಿಎಸ್ ಐ ಹಗರಣದ ಕಿಂಗ್ ಪಿನ್ ವಿಜಯೇಂದ್ರ. ಆ ಸಮಯದಲ್ಲಿ ಅವರ ವಿರುದ್ದ ಏನು ಕ್ರಮ ಕೈಗೊಳ್ಳಲಿಲ್ಲ. ಈಗ ಎಫ್ ಡಿಎ, ಎಸ್ ಡಿಎ ಹಗರಣ ಮಾತನಾಡ್ತೀರಾ. ಮುಖ್ಯಮಂತ್ರಿ ಅವರನ್ನು ಪಿಎಸ್ಐ ಹಗರಣ ತನಿಖೆ ಚುರುಕುಗೊಳಿಸುವಂತೆ ಒತ್ತಾಯ ಮಾಡಿದರು.

ಸಂಸದ ರಾಘವೇಂದ್ರ ಚುನಾವಣೆಯ ಒಂದು ವರುಷದ ಅವಧಿಯ ಸಮಯದಲ್ಲಿ ಮಾತ್ರ ಓಡಾಡ್ತಾರೆ. ನಾನು ಅದು ತಂದೆ, ಇದು ತಂದೆ ಅಂತಾರೆ ಏರ್‌ಪೋರ್ಟ್ ತಂದೆ ಅಂತಾರೆ. ಏರ್ ಪೋರ್ಟ್ ತಂದಿದ್ದು ಯಡಿಯೂರಪ್ಪ ಅವರು. ಚುನಾವಣೆ ಬಂದಾಗ ಹಳ್ಳಿಗಳು ಕಾಣುತ್ತದೆ. ನಾನು ಬಸ್ ಸ್ಟ್ಯಾಂಡ್ ರಾಘು ಅಂತಿದ್ದೆ. ಈಗ ಅವರೇ ಏರ್‌ಪೋರ್ಟ್ ರಾಘು ಅಂತಾ ಕರೀರಿ ಅಂತಾರಂತೆ ಎಂದು ವ್ಯಂಗ್ಯವಾಡಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು 40 ಲಕ್ಷ ಲಂಚ ಪಡೆದಿದ್ದಾರೆ. ಲಂಚ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್ ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರ ಪಾತ್ರ ಇದೆ. ಈಗ ನಮ್ಮದೇ ಸರಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕೆಂದರು.

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಹಾಗೂ ಕಿಯೋನಿಕ್ಸ್ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಷಡಾಕ್ಷರಿ ವರ್ಗಾವಣೆ ವಿಚಾರ ಏನು ದೊಡ್ಡ ವಿಚಾರವಲ್ಲ. ಆವರು ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಅವರ ವಿರುದ್ದ ತನಿಖೆಯಾಗಬೇಕು ಯಾರು ಯಾರದ್ದೋ ತನಿಖೆ ಮಾಡುತ್ತಾರೆ ಈ ಮನುಷ್ಯನ ವಿರುದ್ದವೂ ತನಿಖೆ ನಡೆಸಲಿ. ಕಿಯೋನಿಕ್ಸ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ತನಿಖೆ ಮಾಡಲಿ ಎಂದರು.

ಲೋಕಸಭೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ. ನಾನು ಈ ಬಾರಿ ಲೋಕಸಭೆಗೆ ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಎದುರಿಸಲು ನಾನೇ ಪ್ರಭಲ ಸ್ಪರ್ಧಿ ಎಂದರು.

ಡಿಕೆಶಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ. ನಾನು ಹೇಳೋದು ಎಲ್ಲಾ ಶಾಸಕರಿಗು 20-20 ತಿಂಗಳು ಸಚಿವರನ್ನು ಮಾಡಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. 20 ತಿಂಗಳು ಎಲ್ಲರನ್ನು ಸಚಿವರನ್ನಾಗಿ ಮಾಡಿ. ಅಭಿವೃದ್ಧಿ ಆಗಬೇಕು ಅಂದ್ರೆ ಹೇಗೆ ಬೇಕಾದರೂ ಆಗುತ್ತದೆ ಎಂದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನಾನು ಕೇವಲ ಶಾಸಕ ಅಷ್ಟೇ. ಮೊದಲು ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದರಂತೆ.ಈಗ ಉಸ್ತುವಾರಿ ಸಚಿವರು ಯಾರು ಅಂತಾ ನನಗೆ ಗೊತ್ತಿಲ್ಲ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ ಇದೆಯಂತೆ ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ ಎಂದರು.

Leave A Reply

Your email address will not be published.

error: Content is protected !!