ಶಾಹಿ ಎಕ್ಸ್‌ಪೋರ್ಟ್ಸ್ ಘಟಕದಿಂದ ಪರಿಸರ ನಾಶ ಆರೋಪ ; ಡಿಸಿಗೆ ಮನವಿ

0 0

ಶಿವಮೊಗ್ಗ: ಶಾಹಿ ಎಕ್ಸ್‌ಪೋರ್ಟ್ಸ್ ಘಟಕದಿಂದ ಪರಿಸರ ನಾಶವಾಗುತ್ತಿದೆ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಾಚೇನಹಳ್ಳಿ ಕೈಗಾರಿಕಾ ಸಂಘದ ಪದಾಧಿಕಾರಿಗಳು ಉದ್ಯಮಿಗಳು ಇಂದು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಶಾಹಿ ಎಕ್ಸ್‌ಪೋರ್ಟ್ಸ್ ಘಟಕವನ್ನು ಪರಿವೀಕ್ಷಣೆ ಮಾಡಿದಾದ ಅದರಿಂದ ಆಗುತ್ತಿರುವ ಪರಿಸರ ನಾಶ ಸ್ಪಷ್ಟವಾಗಿದೆ. ಕೈಗಾರಿಕಾ ಘಟಕಗಳಿಗೆ ಅವರ ಚಿಮಣಿಯಿಂದಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ವಿಷಪೂರಿತ ದೂಳು ಹಾಗೂ ದುರ್ವಾಸನೆಯಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಹಿ ಎಕ್ಸ್‌ಪೋರ್ಟ್ಸ್ ಘಟಕವನ್ನು ಮುಚ್ಚಲು ಯೋಗ್ಯವಾದದು ಎಂದು ನಿರ್ಧರಿಸಿ ಮುಚ್ಚುವ ಆದೇಶವನ್ನು ಈಗಾಗಲೇ ನೀಡಿದ್ದಾರೆ. ಇದರಿಂದ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಾದ ತಮ್ಮ ಗಮನಕ್ಕೂ ಬಂದಿದೆ. ಕೆರೆ ಕಟ್ಟೆಗಳು, ಕೈಗಾರಿಕಾ ಘಟಕಗಳು ಹೀಗೆ ಹಲವು ರೀತಿಯಲ್ಲಿ ದುಷ್ಟರಿಣಾಮ ಉಂಟಾಗುತ್ತಿದೆ. ಅಂತರ್ಜಲ ಕಲುಷಿತವಾಗುತ್ತಿದೆ. ಆದ್ದರಿಂದ ಈ ಘಟಕವನ್ನು ತಕ್ಷಣ ಮುಚ್ಚಲು ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗಡೆ, ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕೆ.ವಿ. ವಸಂತ್‌ಕುಮಾರ್, ಎಸ್.ಪಿ. ಚಂದ್ರು, ಪ್ರವೀಣ್ ಹಾಗೂ ಪದಾಧಿಕಾರಿಗಳು ಮತ್ತು ನಿದಿಗೆ ಹೋಬಳಿ ಗ್ರಾಮಸ್ಥರು ಇದ್ದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

Leave A Reply

Your email address will not be published.

error: Content is protected !!