ಶಿಕ್ಷಕರಿಗೆ ಸಾಮಾನ್ಯ ಜ್ಞಾನದ ಜೊತೆಗೆ ಪ್ರಚಲಿತ ವಿದ್ಯಮಾನದ ಅರಿವು ಅಗತ್ಯ ; ಬಿಇಒ ಹೆಚ್.ಆರ್. ಕೃಷ್ಣಮೂರ್ತಿ

0 1,249

ಹೊಸನಗರ: ಶಿಕ್ಷಕರಿಗೆ (Teacher’s) ಸಾಮಾನ್ಯ ಜೊತೆಗೆ ಪ್ರಚಲಿತ ವಿದ್ಯಮಾನದ ಅರಿವು ಅಗತ್ಯವಾಗಿದ್ದು ನಾಳೆ ಶಾಲೆಯಲ್ಲಿ (Schools) ಮಕ್ಕಳಿಗೆ ಪಾಠ ಮಾಡುವ ಬಗ್ಗೆ ಹಿಂದಿನ ದಿನವೇ ಅದರ ಪೂರಕ ಅಭ್ಯಾಸ ಮಾಡಿಕೊಂಡಿರಬೇಕು ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ (Hosanagara BEO) ಹೆಚ್‌.ಆರ್‌. ಕೃಷ್ಣಮೂರ್ತಿಯವರು ಹೇಳಿದರು.

ಹೊಸನಗರದ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆಗಳನ್ನು ಗುರುತಿಸುತ್ತಿದೆ ಅದೇ ರೀತಿ ಶಿಕ್ಷಕರಿಗಾಗಿ ಶಿಕ್ಷಕರ ತಮ್ಮ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಸಹಪಠ್ಯ ಚಟುವಟಿಕೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಸರ್ಕಾರಿ ಶಾಲೆಯ ಶಿಕ್ಷಕರು ಪ್ರೌಢ ಶಾಲಾ ಶಿಕ್ಷಕರು ಭಾಗವಹಿಸಿ ರಾಜ್ಯ ಮಟ್ಟದವರೆಗೆ ತಮ್ಮ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಈ ಪಠ್ಯ ಚಟುವಟಿಕೆಯಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚಿತ್ರಕಲೆ ಜಾನಪದ ಹಾಡು ಇತ್ಯಾದಿ ಚಟುವಟಿಕೆಗಳಿದ್ದು ಈ ಸ್ಪರ್ಧೆಗೆ ಬೇಧಭಾವಗಳಿಲ್ಲ. ಎಲ್ಲಾ ಶಿಕ್ಷಕರ ಭಾಗವಹಿಸಬಹುದು ಈ ಸ್ಪರ್ಧೆಗೆ ತೀರ್ಪುಗಾರರಾಗಿ ತೀರ್ಥಹಳ್ಳಿಯ ವೀರೇಶ್ ರವರ ತಂಡವನ್ನು ಕರೆಸಲಾಗಿದ್ದು ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳುವರು ಶಿಕ್ಷಕರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ರಾಜ್ಯ ಮಟ್ಟದವರೆಗೆ ತಮ್ಮ ಪ್ರತಿಭೆಯನ್ನು ಗುರುತಿಸುವಂತಾಗಲಿ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಪಟ್ಟಣ ಪಂಚಾಯಿತಿ ಸದಸ್ಯ ಆರ್. ಗುರುರಾಜ್‌ರವರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ್, ಪ್ರಾಥಮಿಕ ಪಾಠ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ದೈಹಿಕ ನಿರ್ದೇಶಕ ಬಾಲಚಂದ್ರರಾವ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯೋಪಾಧ್ಯಾಯ ಕುಬೇಂದ್ರಪ್ಪ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ಶಿಕ್ಷಕರ ಸಂಘದ ಉಪಾಧ್ಯಕ್ಷ ಲಿಲೀ ಡಿಸೋಜ, ಪರಮೆಶ್, ಕರಿಬಸಪ್ಪ, ಚನ್ನಬಸಪ್ಪ, ಸಿಆರ್‌ಪಿ ಮಂಜುನಾಥ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಹನ, ಮಾಹಾಂತೇಶ್, ಶಿಕ್ಷಕಿ ವೇದಾಬಾಯಿ, ಆರ್. ಸುರೇಶ್, ರಾಧ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ:

ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮಾವಿನಕೊಪ್ಪ ಈ ಶಾಲೆಗೆ ನೂತನವಾಗಿ ಎಸ್‌ಡಿಎಂಸಿ ಅಧ್ಯಕ್ಷರಾಗಿ ಪಟ್ಟಣ ಪಂಚಾಯತಿ ಸದಸ್ಯ ಆರ್ ಗುರುರಾಜ್ ಹಾಗೂ ಉಪಾಧ್ಯಕ್ಷೆ ಸಹನರವರು ಆಯ್ಕೆಯಾಗಿದ್ದು ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Leave A Reply

Your email address will not be published.

error: Content is protected !!